ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು
ಕುಪ್ಪಗಡ್ಡೆ(ಆನವಟ್ಟಿ)ಯ
ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ
ಅವ್ಯವಸ್ಥೆಗಳ ಆಗರವಾಗಿದೆ.
ಇಲ್ಲಿನ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸದೆ ವ್ಯವಸ್ಥೆ ಹದಗೆಟ್ಟಿದೆ. ಇಲ್ಲಿ ಎಲ್ಲಾ ರೀತಿಯ ಸಿಬ್ಬಂದಿ ಇದ್ದರೂ ಮಕ್ಕಳು ಜೀತದಾಳಿನಂತೆ ದುಡಿಯುತ್ತಿದ್ದು ಮಕ್ಕಳಿಗೆ ಸರಿಯಾದ ಊಟ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳ ಸಿಗದೇ ಪರದಾಡುವoತಾಗಿದೆ ಮಕ್ಕಳ ಎದುರಲ್ಲೇ ಸಿಬ್ಬಂದಿಗಳು ಅನೈತಿಕವಾಗಿ ವರ್ತಿಸುವುದು,ಮಕ್ಕಳಿಂದ ಅಡುಗೆ ಕೆಲಸಗಳನ್ನು ಮಾಡಿಸುವುದು ನೆಲ ಮತ್ತು ಟಾಯ್ಲೆಟ್,ಸ್ನಾನಗೃಹಗಳ ಸ್ವಚ್ಛತೆಯನ್ನು ಕೂಡಾ ವಿದ್ಯಾರ್ಥಿಗಳ ಕಡೆಯಿಂದ ಮಾಡಿಸುತ್ತಿದ್ದಾರೆ ಇದನ್ನು ಮಕ್ಕಳು ಪ್ರಾಂಶುಪಾಲರ ಗಮನಕ್ಕೆ ಕೂಡಾ ತಂದಿದ್ದರೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದೆ ದಿನದೂಡುತ್ತಿದ್ದಾರೆ ಈ ಎಲ್ಲಾ ಅನೈತಿಕ ಚಟುವಟಿಕೆಗಳ ಮೂಲ ರೂವಾರಿ ಪ್ರಾಂಶುಪಾಲರಾಗಿದ್ದು,ಇಲ್ಲಿ ಕೆಲಸ ಮಾಡುತ್ತಿರುವ ಹಲವು ಸಿಬ್ಬಂದಿಗಳು ಪ್ರಾಂಶುಪಾಲರ ಸಂಬಂಧಿ ಮತ್ತು ಸ್ನೇಹಿತರಾಗಿರುತ್ತಾರೆ ಮತ್ತು ಶಾಲೆಯಲ್ಲಿ ಸಿಸಿಟಿವಿ ಬಳಕೆ ಮಾಡದೆ ಇರುವುದು ಕಂಡುಬಂದಿದ್ದು ಇಲ್ಲಿ ಹೆಣ್ಣು ಮಕ್ಕಳಿಗೆ ಭದ್ರತೆ ಇಲ್ಲದೇ ಇರುವುದರಿಂದ ಈ ಕೂಡಲೇ ಮೇಲಾಧಿಕಾರಿಗಳು ಇದರ ಬಗ್ಗೆ ವಿಚಾರಣೆ ನಡೆಸಿ ಮಕ್ಕಳಿಗೆ ರಕ್ಷಣೆ ನೀಡಿ ಅಪರಾಧಿಗಳ ಮೇಲೆ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳುತ್ತೇವೆ ಎಂದು ಪೋಷಕರೊಬ್ಬರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.