ರಾಯಬಾಗ:ವೃತ್ತಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ,ವಯೋ ನಿವೃತ್ತಿಯ ನಂತರದ ತಮ್ಮ ವಿಶ್ರಾಂತಿ ಜೀವನದಲ್ಲಿ ಸಾಮಾಜಿಕ ಕಳಕಳೆಯಿಂದ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕ್ರಿಯಾಶೀಲರಾಗಿ ಕಾರ್ಯೋನ್ಮುಖರಾಗಿ ಜನಪರವಾದ ಹೆಜ್ಜೆ ಹಾಕುತ್ತಿರುವುದನ್ನು ಗುರುತಿಸಿದ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಗೋವಾ ಜಿಲ್ಲಾ ಘಟಕ,ಸಾಲ್ ಸೆಟ್ ತಾಲೂಕು ಘಟಕ ಹಾಗೂ ಸ್ನೇಹ ಸಾಂಸ್ಕ್ರತಿಕ ಸಂಘ (ರಿ.) ಬೆಂಗಳೂರು ಇವರ ಸಹಯೋಗದಲ್ಲಿ ಕಲಾ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಧಕರಿಗೆ ಸನ್ಮಾನ ವಿಶೇಷವಾಗಿ 9 ಟಿವಿ ಕನ್ನಡ ವಾಹಿನಿ ಲೋಕಾರ್ಪಣಾ ಸಮಾರಂಭದಲ್ಲಿ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ವೃತ್ತಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಗಮೇಶ ಮಾದರ ಅವರಿಗೆ ರಾಷ್ಟ್ರೀಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಉದ್ಘಾಕರಾಗಿ ಗೋವಾ ರಾಜ್ಯ ಮಾಜಿ ಮುಖ್ಯಮಂತ್ರಿ ಮಂಡಗಾಂವ್ ಶಾಸಕ ದಿಗಂತ ಕಾಮತ್ ಆಗಮಿಸಿದ್ದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಮಠ,ಕೂಡಲಸಂಗಮ ಇವರು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶಕುಮಾರ್ ಹೊಸಮನಿ ಪ್ರಶಸ್ತಿ ವಿತರಣೆ ಮಾಡಿದರು ನವೆಲಿಯಮ್ ಶಾಸಕ ಉಲ್ಲಾಸ್ ತವನ್ ಕರ್,ಕನ್ನಡ ಸಾಹಿತ್ಯ ಪರಿಷತ್ ಗೋವಾದ ರಾಜ್ಯಾಧ್ಯಕ್ಷ ಸಿದ್ದಣ್ಣ ಮೇಟಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಶುರಾಮ ಕಲಿವಾಳ ವಹಿಸಿಕೊಂಡಿದ್ದರು.
ಸದಾಶಿವ ಹಿರಿಣ್ಣ ಶೆಟ್ಟಿ,ನಾಗರಾಜ್ ಗೊಂದಕರ್,9 ಟಿವಿ ಕನ್ನಡ ಹುಬ್ಬಳ್ಳಿ ವ್ಯವಸ್ಥಾಪಕ ರಹೆಮತ್ ಕಂಚಕಾರ, ಶಿವಾನಂದ ಜಂಗಿ,ಡಾ.ವಸಂತ ಮುರುಳಿ ಹಾಗೂ ಬಸವರಾಜ್ ಬನ್ನಿಕೊಪ್ಪ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.