ಸಿರುಗುಪ್ಪ:ಕಾಮಗಾರಿ ನಡೆಯದೇ ಬಿಲ್ ಮಾಡಿಕೊಂಡ ಪಂಚಾಯಿತಿ ಅಧಿಕಾರಿಗಳು?
ಎಗ್ಗಿಲ್ಲದೇ ನಡೆದ ಹಗರಣಗಳು ತಮ್ಮ ತಪ್ಪನ್ನು ಮುಚ್ಚಿಹಾಕಲು ಅನಧಿಕೃತ ಹಾದಿಯಲ್ಲಿ ಪ್ರಯತ್ನ ನಡೆದಿದೆ
ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಅಧಿಕೃತ ಮಾಹಿತಿ ಪಡೆದು ಹಗರಣಕ್ಕೆ ಸಂಬ0ದಿಸಿದ ದಾಖಲೆಗಳನ್ನು ನೀಡಿ ದೂರು ಸಲ್ಲಿಸಿದರೂ ವಿಳಂಬದ ತನಿಖೆಯು ತಾಲೂಕಿನ ಬಾಗೆವಾಡಿ ಗ್ರಾಮ ಪಂಚಾಯಿತಿಯ ನಡೆಯ ಬಗ್ಗೆ ದೂರುದಾರ ಎಮ್.ಪವನ್‌ಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.
ನನಗಿನ್ನೂ ಅಧಿಕಾರ ಹಸ್ತಾಂತರದ ಪ್ರತಿಯಿಲ್ಲ ಎನ್ನುತ್ತಿರುವ ಅಭಿವೃದ್ದಿ ಅಧಿಕಾರಿ ರಮೇಶ್, ಈಗಾಗಲೇ ಅಧಿಕಾರ ನೀಡಲಾಗಿದೆ ಎನ್ನುತ್ತಿರುವ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ ಅವರ ಗೊಂದಲದ ಹೇಳಿಕೆಯು ವರದಿಗಾರರಿಗೆ ನೀಡುತ್ತಿರುವುದು.ಅಧಿಕಾರ ದುರ್ಬಳಕೆಯ ಜೊತೆಗೆ ಈ ಹಿಂದೆ ಹಗರಣಗಳನ್ನು ನಡೆಸಿರುವ ಅಭಿವೃದ್ದಿ ಅಧಿಕಾರಿಯ ಬೆನ್ನಿಗೆ ನಿಂತು ರಕ್ಷಿಸಿಕೊಳ್ಳುವ ಅನುಮಾನ ಎದ್ದು ಕಾಣುತ್ತಿದೆ.
ಗೊಂದಲದ ಗೂಡಾಗಿರುವ ಬಾಗೆವಾಡಿ ಗ್ರಾಮವೊಂದರಲ್ಲೇ ಇಷ್ಟು ಸಮಸ್ಯೆಗಳಿದ್ದು ಇನ್ನುಳಿದ ಗ್ರಾ.ಪಂ.ಗಳಲ್ಲಿ ಎಷ್ಟಿರಬಹುದೆಂಬುದು ದೂರುದಾರರ ವಾದವಾಗಿದೆ.
ಖಾತ್ರಿಯಾಗದ ನರೆಗಾ,ಕೆರೆಗಳ ನಿರ್ವಹಣೆಯ ನಿರ್ಲಕ್ಷದಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸದೇ ರಕ್ಷಣೆ ಮುಂದಾಗುತ್ತಿರುವ ಅಧಿಕಾರಿ ಇದ್ದರೆಷ್ಟು ಬಿಟ್ಟರೆಷ್ಟೆಂಬುದು ಸಾರ್ವಜನಿಕರ ಆಕ್ರೋಶವಾಗಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.