ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಎಲ್ಲಾ ಶಾಲೆಗಳಿಗೂ ಮಾದರಿ ನಮ್ಮ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ.
ಗುರುಕುಲ ಸಂಪ್ರದಾಯದ ಶಿಕ್ಷಣದ ಜೊತೆಗೆ ಪರಿಸರ ಸ್ನೇಹಿಯೂ ಆದ ಕೃಷಿಯ ಮಹತ್ವವನ್ನು ತೋರಿಸುತ್ತಾ,ಮಕ್ಕಳಿಗೆ ಶಿಸ್ತು , ಸಂಯಮ,ಸಂಸ್ಕಾರ,ಸರಳತೆಯೊಂದಿಗೆ ಜೀವನದ ಮೌಲ್ಯಗಳನ್ನು ತಿಳಿಸುತ್ತಾ ಮಾದರಿಯಾದ ವಸತಿ ಶಾಲೆಯಾಗಿದೆ.
ಸುಂದರ ಪ್ರಕೃತಿಯ ಮಡಿಲಲ್ಲಿ ಮಕ್ಕಳಿಗೆ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗುತ್ತಿದೆ ನಮ್ಮ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ.
“ಅಜ್ಞಾನವನ್ನು ನಾಶ ಮಾಡುವ ಜ್ಞಾನದ ಬೆಳಕನ್ನು ಮನುಷ್ಯನು ಪಡೆದುಕೊಂಡಾಗ ಹಗಲು ಹೊತ್ತಿನಲ್ಲಿ ಸೂರ್ಯನು ಎಲ್ಲದರ ಮೇಲೂ ಬೆಳಕು ಹರಿಸುವಂತೆ,ಅವನ ಜ್ಞಾನವು ಎಲ್ಲವನ್ನೂ ಪ್ರಕಾಶಗೊಳಿಸುತ್ತದೆ ಎಂಬುದು ಈ ನಿಟ್ಟಿನಲ್ಲಿ ಮುಗ್ಧ ಮನಸ್ಸಿನ, ಮುದ್ದು ಮಕ್ಕಳ ಜ್ಞಾನ ಹಾಗು ಭವಿಷ್ಯವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಹಗಲಿರುಳು ಶ್ರಮಿಸಿ,ಮಾರ್ಗದರ್ಶನ ನೀಡುತ್ತಿರುವ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಬಸವರಾಜ್ ಕೆ.ಕೆ. ಸರ್ ಮತ್ತು ಅಲ್ಲಿನ ಸಿಬ್ಬಂದಿವರ್ಗ. ದವರು ಮಕ್ಕಳ ಹತ್ತಿರ ನಡೆದುಕೊಳ್ಳುವ ರೀತಿ ನೋಡಿದರೆ ಎಂತವರಿಗೂ ಕೂಡಾ ಸಂತೋಷವಾಗುತ್ತದೆ ಮತ್ತು ಇಂತಹ ವಸತಿ ಶಾಲೆ ನಮಗೆ ಏಕೆ ದೊರಲಿಲ್ಲವೆಂದು ಸಂಕಟವಾಗುತ್ತದೆ ಈ ದೃಶ್ಯ ನೋಡಲು ತುಂಬಾ ಸುಂದರವಾಗಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.