ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಪಂಚಾಯತಿ ವ್ಯಾಪ್ತಿಯ ಅಲದಹಳ್ಳಿಯಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಜು.6 ರಂದು ಗುರುವಾರ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಮತ್ತಿಹಳ್ಳಿ ಪಂಚಾಯತಿ ವ್ಯಾಪ್ತಿಯ ಅಲದಹಳ್ಳಿ ಇಂದ ಏನ್ ಶೀರನಹಳ್ಳಿ ಹಾಗೂ ಜೋಳದಕೂಡ್ಲಿಗಿ ವರೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಸಿ ನೆಡುವ ಕಾರ್ಯಕ್ರಮ ಸಮಾರೋಪ ನಡೆಯಿತು.
ಈ ವೇಳೆ ಹಲವಾರು ಜಾತಿಯ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಗ್ರಾಮ ಪಂಚಾಯತಿ ಸದಸ್ಯರು ಸ್ವತಃ ತಾವೇ ಗಿಡನೆಟ್ಟು ಸಂತಸಪಟ್ಟು,ಪರಿಸರವನ್ನು ಉಳಿಸಿ,ಬೆಳೆಸುತ್ತೇವೆ. ಪ್ರತಿವರ್ಷ ಗಿಡ ನೆಡುವುದರ ಮೂಲಕ ಅರಣ್ಯವನ್ನು ಕಾಪಾಡುತ್ತೇವೆ ಎಂಬ ಪ್ರತಿಜ್ಞೆಯನ್ನು ಕೈಗೊಂಡರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ಅದ ಕೆ ಹಾಲಪ್ಪ ಹಾಗೂ ಸದಸ್ಯರಾದ ಹೊನ್ನಪ್ಪ,ಹನುಮಂತಪ್ಪ,ಕರಿಬಸಪ್ಪ,ಬೆಣ್ಣಿ ಚನ್ನಬಸಪ್ಪ,ಶಿರಬಿ ಕೊಟ್ರಮ್ಮ,ಮೇಟಿ ಎ ಮಂಜುನಾಥ,ದಕ್ಷಿಣಮೂರ್ತಿ ಸರ್ವ ಸದಸ್ಯರು ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಉಪ ವಲಯ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.