ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹರಿವ ನದಿ

ಜಗತ್ತಿನ ಪ್ರಮುಖ ನಾಗರಿಕತೆಗಳೆಲ್ಲ ರೂಪುಗೊಂಡದ್ದು ನದಿಗಳ ದಂಡೆಯ ಮೇಲೆಯೇ ಪ್ರತಿ ನದಿಯೂ ತಾನು ಅಲ್ಲೆಲ್ಲೊ ಅಜ್ಞಾತ ಸ್ಥಳದಲ್ಲಿ ಹುಟ್ಟಿ ಸಮುದ್ರವನ್ನು ಸೇರುವವರೆಗೂ ನೂರಾರು ಸಾವಿರಾರು ಮೈಲಿಗಳವರೆಗೂ ತನ್ನ ಇಕ್ಕೆಲಗಳ ಸಸ್ಯ ಪ್ರಾಣಿಪಕ್ಷಿ ಮನುಷ್ಯ ಸಂಕುಲವನ್ನು ತಾಯಿ ಮೊಲೆಹಾಲುಣಿಸಿ ಮಗುವನ್ನು ಪೋಷಿಸುವಂತೆ ಸಲಹುತ್ತದೆ ಇಂತಹ ಮಾತೃಹೃದಯಿ ನದಿಗಳಲೊಂದು ನಮ್ಮ ಕನ್ನಡ ನಾಡಿನ ಶರಾವತಿ ತ್ರೇತಾಯುಗದಲ್ಲಿ ರಾಮಸೀತೆಯರು ವನವಾಸದಲ್ಲಿದ್ದಾಗ ಪೂಜೆಗೆ ನೀರು ಸಿಗದಿದ್ದಾಗ ತನ್ನ ಅಂಬಿನಿಂದ ರಾಮ ನೆಲ ಸೀಳಿ ನೀರು ತಂದರೆಂದು,ಆ ನೀರೆ ಹರಿದು ಮುಂದೆ ಶರಾವತಿ ನದಿಯಾಯಿತೆಂದು ಇದಕ್ಕೆ ಪೌರಾಣಿಕ ಉಲ್ಲೇಖವಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಅಂಬುತೀರ್ಥದಲ್ಲಿ ಹುಟ್ಟಿ ಹೊಸನಗರ,ಸಾಗರ ತಾಲೂಕುಗಳಲ್ಲಿ ಹರಿದು ತನ್ನ ಇಕ್ಕೆಲಗಳ ಕಾಡು ಪ್ರಾಣಿಪಕ್ಷಿ ಗದ್ದೆ ತೋಟಗಳಿಗೆ ನೀರುಣಿಸಿ,ಲಿಂಗನಮಕ್ಕಿಯಲ್ಲಿ ನಾಡಿಗೆ ಬೆಳಕಾಗುವ ವಿದ್ಯುತ್ ಆಗಿ,ಜೋಗದಲಿ ಜಲಪಾತವಾಗಿ ಧುಮ್ಮಿಕ್ಕಿ ಉತ್ತರ ಕನ್ನಡದ ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ ಹೀಗೆ ನಮ್ಮ ನಾಡಿನಲ್ಲೇ ಹುಟ್ಟಿ,ನಮ್ಮ ನಾಡಿನಲ್ಲೇ ಹರಿದು,ನಮ್ಮ ನಾಡಿನಲ್ಲೇ ಸಮುದ್ರ ಸೇರುವುದರಿಂದ ಇತರ ನದಿಗಳಂತೆ ಶರಾವತಿ ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯ ತಂದಿಡುವುದಿಲ್ಲ.
ಜೋಗದಿಂದ ಹೊನ್ನಾವರ ಕಾಡುಬೆಟ್ಟ ಕಣಿವೆ ನದಿ ಜಲಪಾತಗಳುಳ್ಳ ರುದ್ರರಮಣೀಯ ದೃಶ್ಯಗಳನ್ನೊಳಗೊಂಡ ಘಾಟಿ ರಸ್ತೆ ಹಲವು ದಶಕಗಳ ಮುಂಚೆ ಈ ರಸ್ತೆಯಾಗುವ ಮೊದಲು ಇಲ್ಲಿಯ ಸುತ್ತಲಿನ ಹಳ್ಳಿಗಳ ಜನಜೀವನವೆಲ್ಲವೂ ಸಂಚಾರಕ್ಕಾಗಿ ಶರಾವತಿ ನದಿಯ ಮೇಲಿನ ದೋಣಿಗಳನ್ನೇ ಅವಲಂಬಿಸಿತ್ತು ದೋಣಿ ನಡೆಸುವುದನ್ನೇ ಕುಲಕಸುಬಾಗಿಸಿಕೊಂಡಿದ್ದ ಹರಿಕಾಂತರರು ನದಿಯಲ್ಲಿ ಮೀನು ಹಿಡಿದು ಮಾರಿ ಬದುಕು ಕಟ್ಟಿಕೊಂಡಿದ್ದರು ಆದರೆ ರಸ್ತೆಯಾದ ಮೇಲೆ ವಾಹನಗಳು ಹೊತ್ತು ತಂದ ಆಧುನಿಕತೆ ಇಲ್ಲಿಯ ಜನಜೀವನವನ್ನು ನದಿಯಿಂದ ದೂರಕ್ಕೆ ಕರೆದೊಯ್ದಿತು ಒಂದು ಕಾಲದಲ್ಲಿ ನದಿಯನ್ನೇ ಆಶ್ರಯಿಸಿಕೊಂಡಿದ್ದ ಜನರು ಕ್ರಮೇಣ ನದಿಯಿಂದ ದೂರಸರಿದರು ತಾವು ಸ್ವತಃ ಕಂಡ ಈ ಬದಲಾವಣೆಗಳನ್ನು ಲೇಖಕ ನಾ. ಡಿಸೋಜ ಅವರು ಅಕ್ಷರ ರೂಪಕ್ಕಿಳಿಸಿ ‘ಹರಿವ ನದಿ’ ಕಾದಂಬರಿಯಾಗಿ ಬರೆದಿದ್ದಾರೆ ಅಂದಿನ ಮೀನುಗಾರರಲ್ಲೇ ಯಾರೋ ಒಬ್ಬರಾಗಿರಬಹುದಾದ ಸಣ್ಣು ಎಂಬ ಪಾತ್ರದ ಮೂಲಕ ಹರಿಕಾಂತರರ, ಮೀನುಗಾರರ ಜೀವನ ಸಂಸ್ಕೃತಿ ಆಧುನಿಕತೆಗೆ ಹಂತಹಂತವಾಗಿ ಹೇಗೆ ಬದಲಾವಣೆಗಳನ್ನು ಕಂಡಿತೆಂಬುದನ್ನು ಈ ಕಾದಂಬರಿ ಪ್ರತಿನಿಧಿಸುತ್ತದೆ. ಒಂದು ನದಿಯನ್ನೇ ಹೀಗೆ ಕೇಂದ್ರವಾಗಿಟ್ಟುಕೊಂಡು ಕಾದಂಬರಿಯಾಗಿಸಿದ್ದು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ.

“ನಾನು ಬದಲಾವಣೆಯ ವಿರೋಧಿ ಅಲ್ಲ ಆದರೆ ಬದಲಾವಣೆಯ ಹೆಸರಿನಲ್ಲಿ ಆಗುವ ಅನಾಹುತಗಳ ಅರಿವು ನಮಗೆ ಇರಬೇಕು ಅನ್ನುವವ ಬದಲಾವಣೆ ಅನ್ನುವುದು ನಮ್ಮ ಬದುಕನ್ನು ಯಾವ ಪ್ರಮಾಣದಲ್ಲಿ ಕಾಡುತ್ತದೆ ಎಂಬುದನ್ನು ತಿಳಿದಿರಬೇಕು” ಎಂದು ಮುನ್ನುಡಿಯಲ್ಲಿ ಹೇಳಿರುವ ಲೇಖಕ ನಾ.ಡಿಸೋಜ ಅವರ ಆಶಯವನ್ನು ತಿಳಿಯಬೇಕೆಂದವರು ಓದಬೇಕಾದ ಕಾದಂಬರಿ ‘ಹರಿವ ನದಿ’.
-ಮಾರುತಿ ಎಸ್ ಗುಡದಲ್ಲಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ