ಭದ್ರಾವತಿ: ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಹಾಗೂ ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ಶ್ರೀ ಅನಿಲ್ ಕುಮಾರ್ ರೆಡ್ಡಿ ಹಾಗೂ ಭದ್ರಾವತಿಯ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರಾದ ಜಿತೇಂದ್ರ ಕುಮಾರ್ ದಯಾಮ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ ಪಿ ಎಸ್ ಐ ರಮೇಶ್ ಮತ್ತು ಪಿಎಸ್ಐ ಶ್ರೀಮತಿ ಭಾರತಿ ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದ್ವಿಚಕ್ರ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಭದ್ರಾವತಿ ಹಾಗೂ ಚನ್ನಗಿರಿ ಉಪವಿಭಾಗದ ಒಟ್ಟು ನಾಲ್ಕು ಬೈಕ್ ಕಳ್ಳತನ ಪ್ರಕರಣಗಳನ್ನು ಬೇಧಿಸಲಾಗಿದೆ.
ನ್ಯೂಟೌನ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 1)81 / 2023 ಕಲಂ-379 ಐಪಿಸಿ ನ್ಯೂ ಟೌನ್ ಠಾಣೆ 2) ಗುನ್ನೆ ನಂ 82/ 2023 ಕಲಂ-379 ಐಪಿಸಿ ನ್ಯೂ ಟೌನ್ 3) ನ್ಯೂಟೌನ್ ಠಾಣೆ ಗುನ್ನೆ ನಂ 106/2022 4) ಚನ್ನಗಿರಿ ಪೊಲೀಸ್ ಠಾಣೆ ಗುನ್ನೆ ನಂ 112/2023 ಕಲಂ 379 ಐಪಿಸಿ ಪ್ರಕರಣದ ಎ1 ಆರೋಪಿಯಾದ ಭದ್ರಾವತಿ ತಾಲ್ಲೂಕು ದಾನವಾಡಿ ಗ್ರಾಮದ ಕೂಲಿ ಕೆಲಸ ಮಾಡುವ ಉಮೇಶ್ ಬಿನ್ ಹರಿಹರಪ್ಪ (41) ಎಂಬಾತನನ್ನು ವಶಕ್ಕೆ ಪಡೆದುಕೊಂಡು 1,25,000 ರೂ. ಬೆಲೆಯ ನಾಲ್ಕು ವಿವಿಧ ಕಂಪನಿಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನ್ಯೂಟೌನ್ ಠಾಣೆಯ ಎಎಸ್ಐ ವೆಂಕಟೇಶ್ ಹಾಗೂ ಠಾಣಾ ಸಿಬ್ಬಂದಿಗಳಾದ ರಂಗನಾಥ್ ಸಿಪಿಸಿ 1193, ತೀರ್ಥಲಿಂಗಪ್ಪ ಸಿಪಿಸಿ 1659, ಪ್ರವೀಣ್ ಕುಮಾರ್ ಸಿಪಿಸಿ 1153 ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳು ಪ್ರಶಂಸಿಸಿದ್ದಾರೆ.
ವರದಿ : ಕೆ ಆರ್ ಶಂಕರ್ ಭದ್ರಾವತಿ