ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ವಿವಿಧ ಬಡವಾಣೆಗಳಲ್ಲಿ ಮಧ್ಯರಾತ್ರಿ ವೇಳೆ ಗುಂಪು ಗುಂಪಾಗಿ ಬೀದಿ ನಾಯಿಗಳು ಸೇರಿಕೊಂಡು ಕಚ್ಚಾಡುತ್ತಾ ದೊಡ್ಡ ಧ್ವನಿಯಲ್ಲಿ ಕಿರಿಚಾಡುವ ಶಬ್ದಕ್ಕೆ ನಿವಾಸಿಗಳು ಬೀದಿ ನಾಯಿಗಳಿಂದ ದಿನ ಪ್ರತಿ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಬಾರದೆ ನಿವಾಸಿಗಳಿಗೆ ಅರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ ಮತ್ತು ಬೈಕ್ ಸವಾರರಿಗೆ ರಸ್ತೆಯಲ್ಲಿ ಬೀದಿ ನಾಯಿಗಳಿಂದ ಹಿಂದೆ ಹಲವು ಬಾರಿ ಅಡ್ಡ ಬಂದು ರಸ್ತೆಯಲ್ಲಿ ಬಿದ್ದು ಸವಾರರು ಕಾಲು ಕೈ ಮುರಿದು ಕೊಂಡು ಹೋಗಿದ್ದಾರೆ ಮತ್ತು ವಿದ್ಯಾಭ್ಯಾಸ ಮಾಡಲು ರಸ್ತೆಯಲ್ಲಿ ಶಾಲೆ ಮತ್ತು ಕಾಲೇಜ್ ಗೆ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವಾಗ ಮತ್ತು ವಿದ್ಯಾಭ್ಯಾಸ ಮುಗಿಸಿಕೊಂಡು ಮನೆಗೆ ತೆರಳುವಾಗ ಬೀದಿ ನಾಯಿಗಳು ಕಿರಿ ಕಿರಿ ಹಾವಳಿ ಹೆಚ್ಚಾಗಿದ್ದು ಬೈಕ್ ಸವಾರರಿಗೆ ದಾಳಿ ನಡೆಸಿ ಕಚ್ಚಲು ಮುಂದಾಗುತ್ತಾವೆ.ಆದಕಾರಣ ಅಧಿಕಾರಿಗಳು ಸಾರ್ವಜನಿಕರಿಗೆ ಬೀದಿ ನಾಯಿಗಳಿಂದ ಗಾಯಗಳು ಆಗಿ ರೋಗಗಳು ಹರಡದಂತೆ ಮುಂಜಾಗ್ರತವಾಗಿ ಇವುಗಳು ನಿಯಂತ್ರಣಕ್ಕೆ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಬೀದಿನಾಯಿಗಳನ್ನು ಹಿಡಿದು ಬೇರೆ ಕಡೆ ಬಿಡಬೇಕೆಂದು ಕರ್ನಾಟಕ ಮಾನವ ಹಕ್ಕುಗಳ ಜನಾಸೇವಾ ಸಂಸ್ತೆ (ರಿ.)ಸಂಘಟನೆಯ ತಾಲೂಕು ಅಧ್ಯಕ್ಷರಾದ ಬಿ.ಸತೀಶ್ ಮತ್ತು ಪಧಾದಿಕಾರಿಗಳಾದ .ಎಚ್.ವೀರುಪಾಕ್ಷಿ ಕೂಡ್ಲಿಗಿ ಸುರೇಶ,ಜಬ್ಬೀರ ಸಾಹೇಬ್ ,ಅಕ್ರೋಶ ವ್ಯಕ್ತಪಡಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.