ಕೊಟ್ಟೂರು:ದೇಶದ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿಗೆ ಸಹಬಾಳ್ವೆ ಸಹಕಾರಿಯಾಗುತ್ತದೆ ಎಂದು ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಯಲು ಸಾಹಿತ್ಯ ವೇದಿಕೆ ವತಿಯಿಂದ ಶ್ರೀ ಮರುಳಸಿದ್ಧೆಶ್ವರ ಸಭಾ ಭವನದಲ್ಲಿ ಭಾನುವಾರ ನಡೆದ ಎರಡನೇ ದಿನದ ನಾವು ನಮ್ಮಲ್ಲಿ 2023 ರ ‘ಸಹಬಾಳ್ವೆಯ ಕಥನಗಳು’ ಎಂಬ ವಿಚಾರ ಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಸಹಬಾಳ್ವೆಯಿಂದ ಭಾಷೆ,ಸಂಸ್ಕೃತಿ,ಜೀವನ ಶೈಲಿ ಹಾಗೂ ಆಚಾರ ವಿಚಾರಗಳು ವೃದ್ಧಿಯಾಗಿ ಕೊಡುಕೊಳ್ಳುವಿಕೆಯಿಂದ ಸಾಮರಸ್ಯ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಈ ದೇಶದ ಅಭಿವೃದ್ಧಿಯು ಎಲ್ಲರೂ ಹೃದಯ ವೈಶ್ಯಾಲ್ಯತೆ, ಉದಾರತೆ,ಸಹಿಷ್ಣುತೆಗಳಿಂದ ವರ್ತಿಸಿದಾಗ ನಮ್ಮ ದೇಶ ಪ್ರಗತಿ ಹೊಂದಲು ಸಾಧ್ಯ ಎಂದರು.
ಸಹಬಾಳ್ವೆ ಎನ್ನುವುದು ಒತ್ತಾಯಪೂರ್ವಕವಾಗದೆ ಸಹಜವಾಗಿಯೇ ಹೊರಹೊಮ್ಮಬೇಕು ಸರಳವಾದ ಜೀವನ ಶೈಲಿ ಹಾಗೂ ಪ್ರೀತಿ ವಿಶ್ವಾಸದಿಂದ ಸಹಬಾಳ್ವೆ ಹೆಚ್ಚುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಯಲು ಸಾಹಿತ್ಯ ವೇದಿಕೆಯ ಎಂ.ಎಸ್.ಶಿವನಗುತ್ತಿ ಹಾಗೂ ಸತೀಶ್ ಶಿಲ್ಲೆ ಮಾತನಾಡಿದರು.
ಬೆಳಗಿನ ಎರಡನೇ ಗೋಷ್ಠಿಯಲ್ಲಿ ‘ಸಹಬಾಳ್ವೆಯ ಸವಾಲುಗಳು‘ ವಿಷಯ ಕುರಿತು ಹೋರಾಟಗಾರ ಮುನೀರ್ ಕಾಟಿಪಳ್ಳ,ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷೆ ಟಿ.ವಿ.ರೇಣುಕಮ್ಮ ಹಾಗೂ ಶಿಕ್ಷಕ ರಾಮಪ್ಪ ಕೋಟಿಹಾಳ್ ಮಂಡಿಸಿದರು ಸಾಹಿತಿ ಪೀರಬಾಷಾ ಹಾಗೂ ಟಿ.ಎಂ.ಉಷಾರಾಣಿ ಮಾತನಾಡಿದರು.
ಮೂರನೇ ಗೋಷ್ಠಿಯಲ್ಲಿ ‘ಸಹಬಾಳ್ವೆ ನೆಲೆಗೊಳಿಸುವ ಬಗೆಗಳು’ ವಿಷಯ ಕುರಿತು ಸಂಸ್ಕೃತಿ ಚಿಂತಕ ಜೆ.ಕರಿಯಪ್ಪ ಮಾಳಿಗೆ ಹಾಗೂ ಲೇಖಕ ಸಂಗನಗೌಡ ಹಿರೇಗೌಡ ಮಾತನಾಡಿದರು ಉಪನ್ಯಾಸಕಿ ಜಿ.ಕೆ.ಪ್ರೇಮ ಹಾಗೂ ಲೇಖಕಿ ಫಾತಿಮಾ ರಲಿಯಾ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಯಲು ಸಾಹಿತ್ಯ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.