ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಶಾಲಾಭಿವೃದ್ಧಿ ಸಮಿತಿಯಿಂದ ತಾಲೂಕಿನ ಸರ್ಕಾರಿ ಶಾಲೆಯಲ್ಲಿರುವ ಹಲವಾರು ಕುಂದು ಕೊರತೆಗಳ ಬಗ್ಗೆ ತಾಲೂಕಿನ ಸಿಎಂಸಿ ಕಮಿಟಿಯ ಸದಸ್ಯರು ಮತ್ತು ಅಧ್ಯಕ್ಷರು ಇಂದು ಮಾನ್ಯ ದಂಡಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನ ಹಲವಾರು ಶಾಲೆಗಳಲ್ಲಿ ಹಾಗೂ ಮಾದಾಪುರ ಗ್ರಾಮದ ಶಾಲೆಯಲ್ಲಿ ಕಟ್ಟಡಗಳು ಇಲ್ಲದೆ ದೇವಸ್ಥಾನದ ಉಗ್ರಾಣದಲ್ಲಿ ಶಿಕ್ಷಕರು ಪಾಠ ನಿರ್ವಹಿಸುತ್ತಿದ್ದು ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ ಹಾಗಾಗಿ ತಕ್ಷಣವೆ ಶಿಕ್ಷಕರನ್ನು ನೇಮಕ ಮಾಡಬೇಕು.
ಹೊನ್ನಾಳಿ ತಾಲೂಕಿನ ಒಂದೇ ಶಾಲೆಯಲ್ಲಿ 10 ರಿಂದ 20 ವರ್ಷ ಅವಧಿಯಿಂದ ಒಂದೇ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಮಾಡುತ್ತಲಿದ್ದು ಇಂಥವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು
ಮತ್ತೆ ಕೆಲವು ಶಿಕ್ಷಕರು ಶಾಲೆಗೆ ಬಾರದೆ ಬಿ ಓ ಆಫೀಸ್ ನಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದಾರೆ ಇಂಥವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ವಾಹಿನಿ ಜೊತೆ ಮಾತನಾಡಿದರು.
ಈ ಸಂದರ್ಭದಲ್ಲಿ ಮಾನ್ಯ ತಹಶಿಲ್ದಾರ ತಿರುಪತಿ ಪಾಟೀಲ ದೂರವಾಣಿ ಮೂಲಕ ಬಿಇಒ ಅವರನ್ನು ಸಂಪರ್ಕಿಸಿ ಅಂತಹ ಶಿಕ್ಷಕರ ಬಗ್ಗೆ ಕ್ರಮ ಕೈಗೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟ,ತಾಲೂಕು ಕಾರ್ಯದರ್ಶಿ ಕೆ ಬಿ ಸತೀಶ್ ಬನ್ನಿಕೋಡ್, ರಮೇಶ್ ಎ.ಕೆ,ಸತೀಶ್, ಸವಿತಮ್ಮ ಇನ್ನೂ ಹಲವಾರು ಸದಸ್ಯರು ಇದ್ದರು.
ವರದಿ-ಪ್ರಭಾಕರ ಡಿ.ಎಮ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.