ಭದ್ರಾವತಿ:ಜೈನ ಮುನಿಗಳ ಹತ್ಯೆಯನ್ನು ಖಂಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ನಗರದ ಜೈನ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಹಿರೇಕೋಡಿ ಗ್ರಾಮದ ನಂದಿ ಪರ್ವತದಲ್ಲಿನ ಜೈನ ಮಂದಿರದ ಮುನಿ ಆಚಾರ್ಯ-108 ಶ್ರೀ ಕಾಮಕುಮಾರ ನಂದಿ ಮುನಿ ಮಹಾರಾಜ್ ರವರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಕೃತ್ಯವು ಇಡೀ ಮನುಕುಲಕ್ಕೆ ಆಘಾತವುಂಟುಮಾಡಿದೆ ಇಂತಹ ಘಟನೆಗಳು ಜೈನ ಸಮಾಜ ಹಾಗೂ ನಾಗರೀಕರಲ್ಲಿ ಅತಿಯಾದ ದುಷ್ಟಪರಿಣಾಮ ಬೀರುತ್ತದೆ ಜೈನ ಮುನಿಗಳ ಹತ್ಯೆ ಖಂಡಿಸಿ,ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಭದ್ರಾವತಿ ಜೈನ ಸಮಾಜವು ರಾಜ್ಯ ಸರ್ಕಾರವನ್ನು ಅಗ್ರಹಿಸಿದೆ.
ಮೌನ ಮೆರವಣಿಗೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್.ಎಸ್.ಎಸ್),ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದವು.
ಜೈನ ಸಮಾಜದ ಅಧ್ಯಕ್ಷ ರತನ್‌ಚಂದ್ ಜೈನ್, ಸಂಚಾಲಕ ಸಂಪತ್‌ರಾಜ್ ಬಾಂಟಿಯಾ,ಸಂದೇಶ್ ಜೈನ್ದಿ ದಿಲೀಪ್ ಮೆಹ್ತಾ,ಭರತ್‌ಕುಮಾರ್, ರಾಹುಲ್‌ಜೈನ್,ಗೌತಮ್ ಚಂದ್,ರಾಜ್‌ಕುಮಾರ್, ಪ್ರೇಮ್‌ಕುಮಾರ್,ಅನಿತಾ,ಲೇಖನಾ,ಕಾಂಚನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವರದಿ:ಕೆ ಆರ್ ಶಂಕರ್ ಭದ್ರಾವತಿ