ಸಿಂಧನೂರು ನಗರದ ಅಮರ ಶ್ರೀ ಆಲದ ಮರಕ್ಕೆ ಮಾನವಿ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿಗಳಾದ ಸುರೇಶ ಅಲಮೇಲು ಭೇಟಿ ನೀಡಿ ವನಸಿರಿ ಫೌಂಡೇಶನ್ ತಂಡದ ಕಾರ್ಯಕ್ಕೆ ಪ್ರಶಂಶೆ ವ್ಯಕ್ತಪಡಿಸಿದರು.
ನಗರದ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿದ ಮಾನವಿ ವಲಯ ಅರಣ್ಯ ಅಧಿಕಾರಿಗಳಾದ ಸುರೇಶ ಅಲಮೇಲು ಅವರು ಮಾತನಾಡಿ ವನಸಿರಿ ಫೌಂಡೇಶನ್ ಪರಿಸರ ರಕ್ಷಣೆ, ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿದೆ.ಈ ಕಾರ್ಯದ ಮೂಲಕ ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಮೂಡಿಸುತ್ತಿದೆ ಇದು ಒಳ್ಳೆಯ ಬೆಳವಣಿಗೆ. ನಮ್ಮ ಅರಣ್ಯ ಇಲಾಖೆಯಿಂದ ಮಾಡುವ ಕಾರ್ಯಗಳನ್ನು ಅಮರೇಗೌಡ ಮಲ್ಲಾಪೂರ ಅವರು ತಮ್ಮ ವನಸಿರಿ ಫೌಂಡೇಶನ್ ಮೂಲಕ ಮಾಡುತ್ತಿದ್ದಾರೆ ಅವರಿಗೆ ನಮ್ಮ ಇಲಾಖೆಯ ವತಿಯಿಂದ ಸಂಪೂರ್ಣವಾಗಿ ಸದಾಕಾಲ ಬೆಂಬಲಾಗಿ ನಿಲ್ಲುತ್ತೇವೆ ಸದ್ಯ ಇದೀಗ ನಮ್ಮ ಭಾಗದಲ್ಲಿ ಮಳೆ ಪ್ರಾರಂಭವಾಗಿದೆ ಮಳೆ ತಡವಾಗಿ ಆರಂಭಿಸಿದ್ದರಿಂದ ಇಲಾಖೆಯಲ್ಲಿ ಸಸಿಗಳನ್ನು ನೀಡುತ್ತಿದ್ದಿಲ್ಲ ಈಗ ಮಳೆ ಪ್ರಾರಂಭವಾಗಿದೆ ಸಾರ್ವಜನಿಕರು,ರೈತರು ಸಸಿಗಳನ್ನು ತೆಗೆದುಕೊಂಡು ಹೋಗಲು ಸಸಿಗಳನ್ನು ನೀಡಲಾಗುತ್ತದೆ ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಅಮರೇಗೌಡ ಮಲ್ಲಾಪೂರ ಹಾಗೂ ವನಸಿರಿ ಫೌಂಡೇಶನ್ ಸದಸ್ಯರು ಇದ್ದರು.