ಕುಣಿಗಲ್:ಜೈನ ಮುನಿ ಶ್ರೀ ಕಾಮಕುಮಾರ ನಂದಿ
ಮಹಾರಾಜರನ್ನ ಹಾಗೂ ಯುವ ಬ್ರಿಗೇಡ್ ಕಾರ್ಯಕರ್ತ ವೇಣು ಗೋಪಾಲ್ ಹತ್ಯೆಗೈದ ಆರೋಪಿಗಳನ್ನ ಕಠಿಣ ಶಿಕ್ಷೆಗೊಳಪಡಿಸಿ
ಗಲ್ಲಿಗೇರಿಸಬೇಕು ಎ೦ದು ಭಜರ೦ಗದಳದ ತಾಲ್ಲೂಕು ಸಂಚಾಲಕ ಗಿರೀಶ್ ಸರ್ಕಾರವನ್ನ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ
ಹಾಗೂ ಹಿ೦ದೂ ಕಾರ್ಯಕರ್ತ ವೇಣು ಗೊಪಾಲ್ ಹತ್ಯೆ ಖಂಡಿಸಿ ಹುಚ್ಚಮಾಸ್ತೀಗೌಡರ ಸರ್ಕಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ
ಹಾಗೂ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿ ಜೈನ ಮುನಿಯವರ ಹತ್ಯೆ ಒಂದು ಹೇಯ ಕೃತ್ಯ, ಯಾವುದೇ ಸಮಾಜದ
ಸ್ವಾಮೀಜಿಗಳಿಗೆ ಇಂತಹ ಸ್ಥಿತಿ ಬರಬಾರದು, ಸ್ವಾಮೀಜಿಗಳು
ಸಮಾಜದ ಆಸ್ತಿ,ಇಂತಹ ಘಟನೆಗಳನ್ನ ಸಾರ್ವಜನಿಕವಾಗಿ
ಎಲ್ಲರೂ ತೀರ್ವವಾಗಿ ಖಂಡಿಸಬೇಕು ಎಂದರು.
”ಮೈಸೂರು ಜಿಲ್ಲೆ ಟಿ.ನರಸೀಪುರ ಪಟ್ಟಣದಲ್ಲಿ ಹನುಮ ಜಯಂತಿ
ಆಚರಣೆ ವೇಳೆ ನಡೆದ ಸಣ್ಣ ಜಗಳ ಕೋಪಕ್ಕೆ ತಿರುಗಿ
ದುಶ್ಕರ್ಮಿಗಳು ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್
ರವರನ್ನ ಹತ್ಯೆ ಮಾಡಿರುವುದು ಖಂಡನೀಯ,ಹಿಂದೂ
ಕಾರ್ಯಕರ್ತನೊಬ್ಬನನ್ನ ಹತ್ಯೆ ಮಾಡಿದ ಕೊಲೆಗಡುಕರನ್ನ
ಗಲ್ಲಿಗೇರಿಸಿ ಎ೦ದರು ಪ್ರತಿಭಟನೆಯಲ್ಲಿ ಭಜರಂಗದಳದ ಸಹ ಸಂಚಾಲಕ ಕಾರ್ತಿಕ್,ಹಿಂದೂ ಮುಖಂಡ ದೇವರಾಜ್ ಹಾಗೂ
ಹಲವಾರು ಹಿಂದೂ ಪರ ಸಂಘಟಕರು ಭಾಗವಹಿಸಿದ್ದರು.
ಹಿರಿಯ ಸ್ವತಂತ್ರ ಹೋರಾಟಗಾರ 106 ವರ್ಷದ
ದಾಳಯ್ಯ ಮಂಗಳವಾರ ನಿಧನರಾಗಿದ್ದ ತಾಲ್ಲೂಕಿನ
ಅಮೃತೂರು ಹೋಬಳಿ ಕಿರಂಗೂರು ಗ್ರಾಮವಾಸಿಯಾಗಿದ್ದ ಇವರು ವಯೋಸಹಜ ದಿಂದ ಸಾವನಪ್ಪಿದ್ದು ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ತಹಶಿಲ್ದಾರ ಮಹಬಲೇಶ್ವರ ಗ್ರಾಮಕ್ಕೆ ತೆರಳಿ
ಅವರ ಅಂತಿಮ ದರ್ಶನ ಪಡೆದು ತಾಲ್ಲೂಕು ಆಡಳಿತದ ಪರವಾಗಿ
ಗೌರವ ಸೂಚಿಸಿದ್ದಾರೆ.
ವರದಿ:ಮನು ಕುಮಾರ್