ತುಮಕೂರು/ವೈ.ಎನ್.ಹೊಸಕೋಟೆ:ಪೊಲೀಸ್ ಇಲಾಖೆ ವತಿಯಿಂದ ರಸ್ತೆ ಸುರಕ್ಷತೆ,ಹೆಲ್ಮೆಟ್ ಮತ್ತು ಸಂಚಾರಿ ನಿಯಮಗಳ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಿದರು.
ಪೋಲಿಸರು ಹೆಲ್ಮೇಟ್ ಧರಿಸಿ ಬೈಕ್ ಮೂಲಕ ಪುರ ಬೀದಿಗಳಲ್ಲಿ ಸಂಚರಿಸಿ ಪ್ರಾಯೋಗಿಕವಾಗಿ ರಸ್ತೆ ಸುರಕ್ಷತಾ ಕುರಿತಾಗಿ ಜಾಗೃತಿ ಮೂಡಿಸಿದರು ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂಬ ಅಭಿಯಾನವನ್ನು ನಡೆಸಿದರು.
ಪಾವಗಡ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಕಾಂತಾ ರೆಡ್ಡಿಯವರ ನೇತೃತ್ವದಲ್ಲಿ ನಡೆದ ಬೈಕ್ ಜಾಥಾದಲ್ಲಿ ಮಾತನಾಡಿದ ಅವರು,ಕಾನೂನಿನ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಿ,ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ಹೆಲ್ಮೇಟನ್ನ ಧರಿಸಬೇಕು,ಕುಡಿದು ವಾಹನ ಚಲಾಯಿಸಬಾರದು,ಹೆಲ್ಮೆಟ್ ಇಲ್ಲದೆ ವೇಗವಾಗಿ ಚಲಿಸಿದರೆ ಅಪಘಾತಕ್ಕೊಳಗಾಗುತ್ತೀರಿ ಇದರಿಂದ ನಿಮಗೂ ನಿಮ್ಮ ಕುಟುಂಬಕ್ಕೂ ನಷ್ಟವಾಗುತ್ತದೆ ಹಾಗಾಗಿ ಹಿತದೃಷ್ಟಿಯಿಂದ ಜಾಗೃತರಾಗಬೇಕಿದೆ ಎಂದು ಸಲಹೆ ನೀಡಿದರು.
ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಗುಲಾಭಿ ಹೂವು ನೀಡಿ ಹೆಲ್ಮೆಟ್ ಧರಿಸುವಂತೆ ಮನವೊಲಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐ ಅರ್ಜುನ್ ಗೌಡ, ಎ.ಎಸ್.ಐ ಹನುಮಾನಾಯ್ಕ,ಶಿವಪ್ಪ, ನರಸಿಂಹಮೂರ್ತಿ,ಸಿಬ್ಬಂದಿಗಳಾದ ಹನುಮಂತು, ರೇವಣಸಿದ್ದೇಶು,ರಾಮಚಂದ್ರ,ಭರತ್,
ಸಿದ್ದೇಶ್,ಗೋಕರ್ಣ,ಚಂದನ್ ಇತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.