ಯಾದಗಿರಿ: ಮೂಲನಿವಾಸಿ ಅಂಬೇಡ್ಕರ್ ಸೇನೆ ವತಿಯಿಂದ ಇಂದು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಹಾಗೂ ಅಂಗನವಾಡಿ ಶಿಕ್ಷಕಿಯರ 42 ಹುದ್ದೆ, ಅಡುಗೆ ಸಹಾಯಕರ ಹುದ್ದೆ 82 ಖಾಲಿ ಇದ್ದು, ವಿಕಲಚೇತನ ಎಂ.ಆರ್.ಡಬ್ಲ್ಯು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸ್ಟಾಪ್ ನರ್ಸ್ ಹುದ್ದೆಯನ್ನು ತುಂಬುವ ಅವಶ್ಯಕತೆ ಇದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ ಕಾರಣ ಜಿಲ್ಲಾಧಿಕಾರಿಗಳು ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಸಂಚಾಲಕರಾದ ರಂಗನಾಥ ಬಾಗ್ಲಿ ಅವರು ಹೇಳಿದರು.
ಇದೆ ಸಂದರ್ಭದಲ್ಲಿ ಮೂಲನಿವಾಸಿ ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳಾದ ಶರಣರಡ್ಡಿ ಹತ್ತಿಗೂಡೂರ, ಮೈಲಾರಿ ಅಲ್ಲಿಪೂರ, ಪರಶುರಾಮ ಹೇಮಾಳ, ಭೀಮಪ್ಪ ಹಾಲಗೇರ, ದೇವರಾಜ ಮುನಮುಟಗಿ, ಮಂಜುನಾಥ ಯಾದಗಿರಿ ಎಲ್ಲರೂ ಭಾಗವಹಿಸವಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ