ಏ ಮನುಜ ನಿನ್ನ ನಡೆ ಏನು?
ಗೇಣು ಹೊಟ್ಟೆಗೋಸ್ಕರ ಬಡಿದಾಡುವ ನಿನ್ನ ಹೊರೆ ಏನು?
ನಿನ್ನಲ್ಲಿ,ನಿನ್ನವರ ಕಂಡುಕೊಳ್ಳದೆ ಮುಚ್ಚಿಟ್ಟು ತಿಂದು, ಅರಗಲಾರದೆ ಉಬ್ಬರಿಸಿ ಬಂದ ಹೊಟ್ಟೆಯ ಫಲವೇನು?
ನಿನದಲ್ಲದ ನಿನ್ನವರ ಕಂಡು ಮರಗಿ,ಕೊರಗಿ ನಿನ್ನದೆಂದು ಹಂಬಲಿಸಿದ,ಹಂಬಲಿಕೆಗೆ ಬೆಲೆ ಏನು?
ಪ್ರತಿಫಲ ಅಪೇಕ್ಷಿಸದೆ ಬಾಳು ಪ್ರತಿ ಸಾರಿ,
ಕೂಡಿಟ್ಟ ಬುತ್ತಿಯ ಕೊನೆಯಲ್ಲಿ
ಹೇರಿ,ಶೃಂಗರಿಸಿ ಕಳಿಸುವ ನಿನ್ನ ಸಾರ್ಥಕವಲ್ಲದ ಬದುಕಿಗೆ ಹೊಣೆ ನೀನು
ಕಷ್ಟದಲ್ಲಿ ಕೈ ಹಿಡಿಯದ ಸಂಬಂಧವ ತೊರೆದು
ಆಶ್ರಯಿಸುವ ಮನಕ್ಕೆ,ಬಲ ತೋರುವ ನೆಲೆ ನೀನು
-ಮದನಾ ವೈಶಾಲಿ.ಜಾಲಹಳ್ಳಿ ಕ್ರಾಸ್ ಶೆಟ್ಟಿಹಳ್ಳಿ ಬೆಂಗಳೂರು-560015