ಗದಗ:ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕಪ್ಪತ್ತಗುಡ್ಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ ಅತಿಯಾದ ವಾಹನ ದಟ್ಟನೆಯ ಶಬ್ಧ ಮಾಲಿನ್ಯ ಹಾಗೂ ಪ್ಲಾಸ್ಟಿಕ್ ಬಳಕೆ ಪ್ರಾಣಿಗಳ ಜೀವಕ್ಕೆ ಕುತ್ತು ತರುತ್ತಿದೆ ಅಲ್ಲದೇ ಪುಂಡ ಪೋಕರಿಗಳಿಂದ ಮಧ್ಯದ ಬಾಟಲಿಗಳು,ಸಿಗರೇಟ್,ಗುಟ್ಕಾ ಚಿಪ್ಸ್ ಪ್ಲಾಸ್ಟಿಕ್ ಪಾಕೀಟ್ ಗಳು ಕಂಡು ಬರುತ್ತಿರುವುದು ಸಸ್ಯಕಾಶಿ ಕಪ್ಪತ್ತಗುಡ್ಡದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ ಕಪ್ಪತ್ತಗಿರಿ ಸರಂಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಸರಕಾರಕ್ಕೆ ಆಗ್ರಹಿಸಿದ್ಧಾರೆ.
ಇತ್ತೀಚಿಗೆ ನಡೆಸಿದ ಸರ್ವೆಯಲ್ಲಿ ಅಪರೂಪದ ಪ್ರಾಣಿಗಳು ಕಂಡು ಬಂದಿರುವುದು ಕಪ್ಪತ್ತಗಿರಿಗೆ ಕಳಸವಿಟ್ಟಂತಾಗಿದೆ.
ಅಪಾರ ಆಯುರ್ವೆದ ಔಷಧಿ ಸಸ್ಯಗಳ ಸಸ್ಯಕಾಶಿ,ಪಂಚಲೋಹಗಳ ಬೀಡು,ಶುದ್ಧ ಗಾಳಿ ಬೀಸುವ ಕಪ್ಪತ್ತಗಿರಿ ಸಂಪತ್ತನ್ನು ಅಭಿವೃದ್ಧಿಪಡಿಸಬೇಕಾಗಿದೆ,ಬಂದ ಪ್ರವಾಸಿಗರು ಪ್ಲಾಸ್ಟಿಕ್ ಕವರ್,ನೀರಿನ ಬಾಟಲ್ ಊಟ ಮಾಡಿದ ಎಲೆಗಳನ್ನು ಎಲ್ಲೇಂದರಲ್ಲಿ ಬೀಸಾಕಿರುವುದು ಪ್ಲಾಸ್ಟಿಕ್ ಕಸದ ರಾಶಿಯಿಂದಾಗಿ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ.
ಕಪ್ಪತ್ತಗುಡ್ಡಕ್ಕೆ ಬರುವ ಪ್ರವಾಸಿಗರಿಗೆ ಸ್ವಚ್ಚತೆಯ ಅರಿವು ಮೂಡಿಸಲು ಫಲಕಗಳನ್ನು ಅಳವಡಿಸಬೇಕು,ಕಪ್ಪತ್ತಗುಡ್ಡಕ್ಕೆ ಬರುವ ಪ್ರಮುಖ ರಸ್ತೆಯ ದ್ವಾರಗಳಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆದು ನಿಗಾವಹಿಸಬೇಕು,ಜನಬಿಡಿತ ಪ್ರದೇಶಗಳಲ್ಲಿ ಡಸ್ಟಬಿನ್ ಗಳನ್ನು ಇಡಬೇಕು ಮತ್ತು ಕಪ್ಪತ್ತಗುಡ್ಡದ ಸರಂಕ್ಷಣೆಗೆ ನಿಗ್ರಹ ಘಟಕಗಳನ್ನು ಸ್ಥಾಪಿಸಿ,ಪರಿಸರ ಹಾನಿಗೊಳಿಸುವವರಿಗೆ ದಂಡ ವಿಧಿಸುವ ಕಾರ್ಯ ನಡೆಯಬೇಕು ಅಲ್ಲದೇ ಎನ್ ಎಸ್ ಎಸ್ ಘಟಕಗಳನ್ನು ಹಾಗೂ ವಿವಿಧ ಸಂಘ ಸಂಸ್ಥೆಗಳನ್ನು ಬಳಸಿಕೊಂಡು ಕಪ್ಪತ್ತಗುಡ್ಡದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಹಳ್ಳಿಕೇರಿಮಠ ವಿನಂತಿಸಿದ್ಧಾರೆ.
ಉತ್ತರ ಕರ್ನಾಟಕದ ಸಹ್ಯಾದ್ರಿ,ಸ್ಕಂದ ಪುರಾಣದಲ್ಲಿ ಎಪ್ಪತ್ತಗಿರಿಗಿಂತ ಕಪ್ಪತ್ತಗಿರಿ ನೋಡು ಎಂಬ ಉಕ್ತಿ ಹೊಂದಿದ ನಾಡಿನ ಸಂಪನ್ಮೂಲ ಕಪ್ಪತ್ತಗಿರಿಯ ಸೌರಂಕ್ಷಣೆಗೆ ಸರಕಾರ ಕಠಿಣ ಕ್ರಮಕೈಗೊಳ್ಳುವದರ ಮೂಲಕ ರಕ್ಷಿಸಸಬೇಕಾಗಿದ್ಧು ಪರಿಸರದ ರಕ್ಷಣೆಗೆ ಒತ್ತು ನೀಡಬೇಕೆಂದು ಹಳ್ಳಿಕೇರಿಮಠ ಆಗ್ರಹಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.