ಹನೂರು:ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕ ಮಾಲಪುರ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಚಾಮಮ್ಮ ಅಧ್ಯಕ್ಷರಾಗಿ ಹಾಗೂ ಚನ್ನಯ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾದ ಚಾಮಮ್ಮ ಮಾತನಾಡಿ ಗ್ರಾಮಗಳ ಅಭಿವೃದ್ದಿಯೆ ನನ್ನ ಮೂಲ ಗುರಿ ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರನ್ನು ಒಳಗೊಂಡಂತೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಒತ್ತು ಕೊಟ್ಟು ಅಧಿಕಾರ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪಿ ಡಿ ಒ ಮಹಾದೇವ ಪ್ರಭು, ಸದಸ್ಯರು ಗಳಾದ ನಾಗಣ್ಣ ಪಿ, ಗುರುಮೂರ್ತಿ,ಪ್ರಭುಸ್ವಾಮಿ ಸೇರಿದಂತೆ ಮುಖಂಡರುಗಳಾದ ಅಂಕರಾಜು,ನಂಜುಂಡಸ್ವಾಮಿ, ಮಾದೇಶ್,ಸಿದ್ದಾರಾಜು,ಇತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್
