ತಾಳಿಕೋಟೆ:ಇಂದು ತಾಳಿಕೋಟಿ ಪಟ್ಟಣದಲ್ಲಿ 2023/24 ನೇ ಸಾಲಿನ ಫಸಲ ಭೀಮಾ ಯೋಜನೆಯಡಿ ಬೆಳೆ ವಿಮೆ ತುಂಬಲು ಬಂದ ರೈತರಿಗೆ ಕೇವಲ ಮೂರೇ ದಿನ ಬಾಕಿ ಇರುವ ಕಾರಣ ಸುತ್ತ ಮುತ್ತಲಿನ ಗ್ರಾಮದಿಂದ ಬರುತ್ತಿದ್ದಾರೆ.ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದರು ರೈತರ ನೆರವಿಗೆ ಯಾವ ಒಬ್ಬ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ರೈತರ ಕಷ್ಟಕ್ಕೆ ಯಾರೂ ಬರುತ್ತಿಲ್ಲ ಗ್ರಾಮಸ್ಥರು ಕೃಷಿ ಕೇಂದ್ರಗಳಿಗೆ ಬಂದರೆ ಇಲ್ಲಿ ಸರ್ವರ್ ಕೈ ಕೊಡುತ್ತಿದೆ ಎನ್ನುತ್ತಾರೆ.ರೈತರ ಎಫ್.ಐ.ಡಿ ಆಗುತ್ತಿಲ್ಲ ಇದರಿಂದ ಫಸಲು ಭೀಮಾ ಯೋಜನೆಯ ದಿನಾಂಕವನ್ನು ಸರ್ಕಾರ ಇನ್ನೂ 15 ದಿನ ಮುಂದೆ ಹಾಕಿದರೆ ರೈತರಿಗೆ ತುಂಬಾ ಅನುಕೂಲ ಆಗುತ್ತದೆ ಎಂದು ರೈತರು ತಮ್ಮ ನೋವು ಹಂಚಿಕೊಂಡರು.
ಈ ಸಂದರ್ಭದಲ್ಲಿ ಕಲಕೇರಿ ಗ್ರಾಮದ ಹಣಮಂತ ವಡ್ಡರ,ಶಮಿರ ಬಿಸನಾಳ,ರಮೇಶ,ದೇವರಾಜ ಚಬನೂರ ಹಾಗೂ ಸುತ್ತ ಮುತ್ತಲಿನ ರೈತರು ದಿನವಿಡೀ ಕೃಷಿ ಕೇಂದ್ರಕ್ಕೆ ಬಂದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಹೇಳುತ್ತಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.