ಹನೂರು:ತಾಲೂಕಿನ ಲೋಕ್ಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎಂ.ನಾಗೇಶ್ ಹಾಗೂ ಉಪಾಧ್ಯಕ್ಷರಾಗಿ ನಂದಿನಿ ಅವರು ಆಯ್ಕೆಯಾಗಿದ್ದಾರೆ
ಲೋಕ್ಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರಾಗಿ ನಾಗೇಶ್ .ಎಂ.ಹಾಗೂ ಕಾಂಗ್ರೆಸ್ ಬೆಂಬಲಿತರಾಗಿ ಮಧು ಮಿತ್ರ ಅವರು ನಾಮಪತ್ರವನ್ನು ಸಲ್ಲಿಸಿದರು.
ಮತ ಹಾಕುವ ಮೂಲಕ ಚುನಾವಣೆಯನ್ನು ನಡೆಸಲಾಯಿತು ವೇಳೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಗೇಶ್ ಅವರು 8 ಮತಗಳನ್ನು ಪಡೆದುಕೊಂಡರು ಹಾಗೂ ಕಾಂಗ್ರೆಸ್ ಬೆಂಬಲಿತ ಮಧು ಮಿತ್ರ ಅವರು 7 ಮತಗಳನ್ನು ಪಡೆದುಕೊಂಡರು ಒಂದು ಮತಗಳ ಅಂತರ ದಿಂದ ನಾಗೇಶ್ ಅವರು ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ನಂದಿನಿ ಹಾಗೂ ಭಾಗ್ಯಶ್ರೀ ನಾಮ ಪತ್ರ ಸಲ್ಲಿಸಿದರು ಮತದಾನ ಮಾಡುವ ಮೂಲಕ ಉಪಾಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡಲಾಯಿತು,ಮತದಾನದಲ್ಲಿ ನಂದಿನಿ ಅವರು 9ಮತ ಗಳನ್ನು ಪಡೆದುಕೊಂಡರು ಹಾಗೂ ಭಾಗ್ಯಶ್ರೀ ಅವರು 6ಮತ ಗಳನ್ನು ಪಡೆದುಕೊಂಡಿದ್ದಾರೆ.
ಉಪಾಧ್ಯಕ್ಷರಾಗಿ ನಂದಿನಿ ಅವರನ್ನು ಚುನಾವಣೆ ಅಧಿಕಾರಿಗಳು ಘೋಷಣೆ ಮಾಡಿದರು ಚುನಾವಣೆ ಅಧಿಕಾರಿಯಾಗಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನವೀನ್ ಮಠದ್ ಅವರು ಕರ್ತವ್ಯ ನಿರ್ವಹಿಸಿದರು.
ನೂತನವಾಗಿ ಆಯ್ಕೆ ಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಕಾರ್ಯಕರ್ತರು ಹಾಗೂ ಬೆಂಬಲಿಗರು ಹಾರ ಹಾಕಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಪಿಡಿಒ ರಘುನಾಥ್ ಸದಸ್ಯರುಗಳಾದ ಜ್ಯೋತಿ ಮಣಿ,ಮುತ್ತು ಸ್ವಾಮಿ,ಸಿದ್ದೇ ಗೌಡ, ಮಾದೇವಿ,ಭಾಗ್ಯಶ್ರೀ,ಸಂತ ಮಣಿ ರಂಗ,ಮಧು ಮಿತ್ರ ಎಂ,ಮಂಗಲ,ಶಿವ ಕುಮಾರ್,ಸಿದ್ದರಾಜು,ಶೇಖರ್, ಮೀನಾಕ್ಷಿ,ಸೇರಿದಂತೆ ಮುಖಂಡರುಗಳು ರುದ್ರ ಹಾಗೂ ಸಾರ್ವಜನಿಕರು ಇದ್ದರು.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.