ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಗುರುವಾರ ಮಧ್ಯರಾತ್ರಿ ಕೃಷ್ಣಾ ನದಿಗೆ ಸುಮಾರು 1.70 ಲಕ್ಷ ಕ್ಯೂಸೆಕ್ಸ್ ನೀರು ಕೃಷ್ಣಾ ನದಿಗೆ ಬಿಡಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ ಶುಕ್ರವಾರ ಬೆಳಿಗ್ಗೆ ಯಾದಗಿರಿ ಜಿಲ್ಲೆ ಶಹಾಪುರ ಮೂಲಕ ಹಾಯ್ದು ಹೋಗುವ,ಕಲಬುರಗಿ-ರಾಯಚೂರು ಜಿಲ್ಲೆಗಳ ಸಂಪರ್ಕಿಸುವ ರಾಜ್ಯ ಹೆದ್ದಾರಿ-15 ರಲ್ಲಿ ಬರುವ, ಶಹಾಪುರ ತಾಲೂಕು ಕೊಳ್ಳೂರು (ಎಂ) ಸೇತುವೆ ಮೇಲೆ ಹರಿದು ಬರುತ್ತಿರುವುದರಿಂದ ಯಾರೂ ನದಿಯ ದಡದಲ್ಲಿ ಬರದಂತೆ ಅಧಿಕಾರಿಗಳು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಬೇಕು ಮೇಲ್ಮಟ್ಟಕ್ಕೆ ನೀರು ಬರಲು 5-6 ಅಡಿಗಳಷ್ಟು ಮಾತ್ರ ಉಳಿದಿದೆ.
ಮಧ್ಯಾಹ್ನದ ವೇಳೆಗೆ ಜಲಾಶಯದಿಂದ ಹೊರಹರಿವು ತಗ್ಗಿದ್ದರಿಂದ,ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯುವ ಸಾಧ್ಯತೆ ಕಡಮೆಯಾಗಿ,ಸುತ್ತಮುತ್ತಲ ಪ್ರದೇಶದ ಜಮೀನುಗಳು ಈಗಾಗಲೇ ಜಲಾವೃತಗೊಂಡಿವೆ ಯಾದಗಿರಿ ಜಿಲ್ಲೆಯ ಗಡಿಭಾಗದ ಈ ಸೇತುವೆ ದಾಟಿದರೆ,ರಾಯಚೂರು ಜಿಲ್ಲೆಯ ದೇವದುರ್ಗ ಕೇವಲ 10 ಕಿ.ಮೀ. ಅಂತರದಲ್ಲಿದೆ ಸುತ್ತ ಮುತ್ತಲಿನ ಗ್ರಾಮದ ರೈತರು ಸೇತುವೆ ಮುಳುಗುತ್ತದೆ ಎಂದು ಆತಂಕದಲ್ಲಿದ್ದಾರೆ,
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ