ಬೆಂಗಳೂರು ನಗರದ ನಂದಿನಿ ಲೇಔಟ್ ನಲ್ಲಿ ನ್ಯೂ ಇಂಡಿಯನ್ ಹೈಸ್ಕೂಲ್ ನಲ್ಲಿ ಸುಮಾರ್ 400 ಮಕ್ಕಳಿಗೆ ಕರಾಟೆ ತರಬೇತಿ ನೀಡುತ್ತಿದ್ದಾರೆ ನೇಪಾಳ ದೇಶದ ಶಿಹಾನ್ ಗಣೇಶ ಬಹುದೂರ ಗುರುಗಳು ಆಲನ ತಿಲಕ ಇಂಟರ್ನ್ಯಾಷನಲ್ ಶಿಟೋರಿಯೋ ಕರಾಟೆ ಸಂಸ್ಥೆ ಕಡೆಯಿಂದ ಬ್ಲಾಕ್ ಬೆಲ್ಟ್ ಫೋರ್ತ್ ಡಾನ್ ಪದವಿ ಪಡೆದುಕೊಂಡಿದ್ದಾರೆ 1999ರಲ್ಲಿ ನೇಪಾಳ ದೇಶದಿಂದ ಕರ್ನಾಟಕದ ರಾಜಧಾನಿ ಬೆಂಗಳೂರು ನಗರಕ್ಕೆ ಬಂದು ಸುಮಾರು 23 ವರ್ಷಗಳಿಂದ 12,000 ಯುವಕ ಯುವತಿಯರಿಗೆ ತರಬೇತಿ ನೀಡಿದ್ದಾರೆ ಇವರ ಕೈಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಅದೇ ರೀತಿಯಾಗಿ ಅನೇಕ ವಿದ್ಯಾರ್ಥಿಗಳು ಪೊಲೀಸ್,ಸೈನಿಕರು,ಲೋಕಾಯುಕ್ತ ಇಲಾಖೆಯಲ್ಲಿ ಹಾಗೂ ಅನೇಕರು ಕರಾಟೆ ಶಿಕ್ಷಕರಾಗಿ ಸಿನಿಮಾ ರಂಗದಲ್ಲಿ ಪತ್ರಿಕಾ ರಂಗದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅನೇಕ ಗ್ರಾಮೀಣ ಭಾಗದ ಯುವಕರಿಗೆ ಕಡಿಮೆ ಖರ್ಚಿನಲ್ಲಿ ತರಬೇತಿ ನೀಡುತ್ತಿದ್ದಾರೆ ಎಂದು ಶಿಹಾನ್ ಗಣೇಶ್ ಬಹದ್ದೂರ್ ಗುರುಗಳ ಶಿಷ್ಯರಾದ ಜೋಗೇಂದರ ಮಾಸ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.