ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಚಿಕ್ಕಹೆಸರೂರು ಗ್ರಾಮದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಓಪನ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು,ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕ್ರಿಕೆಟ್ ಪ್ರೇಮಿಗಳನ್ನು ನಾವು ಕಾಣಬಹುದು.ಈ ಒಂದು ಕ್ರೀಡೆಗೆ ಮನ ಸೋಲದವರೇ ಇಲ್ಲ ಎಂದು ಹೇಳಬಹುದು.ಈ ಟೂರ್ನಮೆಂಟ್ ಗ್ರಾಮೀಣ ಪ್ರತಿಭೆಗಳಿಗಾಗಿ ನಿಯೋಜನೆ ಮಾಡಿಲಾಗಿದೆ.
ಈ ಟೂರ್ನಮೆಂಟನಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗಾಗಿ ಮಾತ್ರ ಅವಕಾಶ ನೀಡಿದ್ದು ಇದರಿಂದ ಗ್ರಾಮೀಣ ಪ್ರತಿಭೆಗಳು ಬೆಳೆಯಲು ಮತ್ತು ತಮ್ಮ ಹೆಸರು ಗುರಿತಿಸಿಕೊಳ್ಳಲು ಇದು ಒಂದು ಉತ್ತಮ ಟೂರ್ನಮೆಂಟ್ ಆಗಿದೆ ಎಂದು ಈ ಟೂರ್ನಮೆಂಟ್ ನಡೆಯಲು ಮುಖ್ಯ ಕಾರಣರಾದ ದೇವರಡ್ಡಿ ಮಡಿವಾಳ ಅವರು ತಮ್ಮ ವಯಕ್ತಿಕ ಕೆಲಸ ಬಿಟ್ಟು ಮಳೆ,ಗಾಳಿ,ಚಳಿ ಎನ್ನದೆ ಹಗಲಿರುಳು ಕೆಲಸ ಮಾಡಿ ಕ್ರೀಡಾಂಗಣವನ್ನು ಉತ್ತಮ ರೀತಿಯಲ್ಲಿ ತಯಾರಿ ಮಾಡಿದ್ದಾರೆ ಕರುನಾಡ ಕಂದ ಪತ್ರಿಕೆಯ ವರದಿಗಾರರ ಜೊತೆ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಕ್ರೀಡೆ ನಡೆಸಲು ಕ್ರೀಡಾಂಗಣ ಇಲ್ಲದಿರುವುದು ಬೇಸರದ ಸಂಗತಿ ಎಂದು ತಮ್ಮ ನೋವನ್ನು ಕೂಡಾ ಹಂಚಿಕೊಂಡಿದ್ದಾರೆ ಮತ್ತು ಇವರು ಕೂಡಾ ಕ್ರಿಕೆಟ್ ನ ಹುಚ್ಚು ಪ್ರೇಮಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ತಮ್ಮ ಹೆಸರನ್ನು ಹೊಡಿ ಬಡಿ ಆಟಗಾರನೆಂದು ಗುರುತಿಸಿಕೊಂಡಿದ್ದಾರೆ ಮತ್ತು ಒಳ್ಳೆಯ ಮ್ಯಾಚ ಪಿನಿಷೇರ್ ಆಟಗಾರ ಹಾಗೂ ಚಿಕ್ಕಹೇಸರೂರಿನ ಒಳ್ಳೇ ಕ್ರಿಕೆಟ್ ದೈತ್ಯ ಆಟಗಾರ ಅಂತಾನೆ ಕರೀತಾರೆ ಇಲ್ಲಿನ ಯುವಕರು ಹಾಗೂ ಕ್ರಿಕೆಟ್ ಪ್ರೇಮಿಗಳು.ಇವತ್ತು ಮೊದಲ ಪಂದ್ಯಗಳು ಪ್ರಾರಂಭವಾಗಿದ್ದು,ಯಂಗ್ ಸ್ಟಾರ್ ಕಾಚಾಪುರ ವಿರುದ್ಧ ಮಹಿಪಾಟೀಲ್ ಸಿ.ಸಿ.ಗೆಜ್ಜೆಲಗಟ್ಟಾ ಪಂದ್ಯ ಪ್ರಾರಂಭವಾಗಿದ್ದು ಮೊದಲ ಪಂದ್ಯದಲ್ಲಿ ಮಹಿ ಪಾಟೀಲ್ ಸಿ.ಸಿ ಗೆಜ್ಜೆಲಗಟ್ಟಾ ಪಂದ್ಯ ಗೆದ್ದು ಬೀಗಿದೆ.ಈ ಪಂದ್ಯದ ನಿರ್ಣಾಯಕರಾಗಿ ವಿಜಯ ಮಾಲಿಪಾಟೀಲ್ ಹಾಗೂ ಮೌನೇಶ ಜಾಲಹಳ್ಳಿ ಕಾರ್ಯ ನಿರ್ವಹಿಸುತ್ತಿರುವುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ ಕಾರಣ,ಇವರು ಒಳ್ಳೆಯ ಕ್ರಿಕೆಟ್ ಪ್ರೇಮಿಗಳು ಆಗಿದ್ದು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಈ ಕ್ರಿಕೆಟ್ ಟೂರ್ನಮೆಂಟ್ ಗೋಸ್ಕರ ಮತ್ತು ಯಶಸ್ವೀ ಆಗಲು ತಮ್ಮ ಸಮಯ ಕೊಟ್ಟಿದ್ದಾರೆ.
ಈ ಗ್ರಾಮದ ಕ್ರಿಕೆಟ್ ಪ್ರೇಮಿಗಳಾದ ಕುಮಾರ ಮೇಟಿ ಹಾಗೂ ಮೌನೇಶ ಪೂಜಾರಿ ಮಾತನಾಡಿ ಈ ಪಂದ್ಯಾವಳಿ ಗಳಿಂದ ಗ್ರಾಮೀಣ ಪ್ರತಿಭೆಗಳು ಬೆಳೆಯುತ್ತಾರೆ ಮತ್ತು ಇದರಿಂದ ಒಳ್ಳೆಯ ಆಟಗಾರರು ಕೂಡಾ ಪರಿಚಯವಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್ ಪಂದ್ಯವಾಡಲು ಅನುಕೂಲ ವಾಗುತ್ತದೆ ಎಂದು ಕರುನಾಡ ಕಂದ ಪತ್ರಿಕೆಗೆ ತಿಳಿಸಿದ್ದಾರೆ.
ವರದಿ:ಪುನೀತಕುಮಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.