ಬಸವನಬಾಗೇವಾಡಿ: ಪಟ್ಟಣದ ಶ್ರೀ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕರುನಾಡು ಸಾಹಿತ್ಯ ಪರಿಷತ್ತು ಬಸವನ ಬಾಗೇವಾಡಿ ಘಟಕದ ವತಿಯಿಂದ ಆಯೋಜಿಸಲಾದ ಕವನ ರಚನೆಯ ಕಾರ್ಯಗಾರ ಹಾಗೂ ಕರೋಕೆ ಗಾಯನ ಸ್ಪರ್ಧೆಯ ಕಾರ್ಯಕ್ರಮವನ್ನು ಕರುನಾಡು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಅಸ್ಲಂ ಶೇಖ ನರಸಲಗಿ ತಮ್ಮ ಧರ್ಮ ಪತ್ನಿ ಚಾಂದಬಿ ನದಾಫರೊಂದಿಗೆ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಲು ಮಾರ್ಗದರ್ಶನ ನೀಡಿದ ಅವರು, ತಾವು ರಚಿಸಿದ ಮಕ್ಕಳ ಕವನವನ್ನು ಓದಿಸಿ ಯಾವ ರೀತಿ ರಚಿಸಬೇಕು , ಪ್ರಾಸ ಪದಗಳನ್ನು ಹೇಗೆ ಜೋಡಿಸಬೇಕು ಎನ್ನುವುದರ ಕುರಿತು ತಿಳಿಸದರಲ್ಲದೆ ಕರೋಕೆ ಸಂಗೀತ ಗಾಯನ ಕುರಿತಾಗಿಯೂ ತಿಳಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿದ ನೀಲಪ್ಪ ಅಂಗಡಿ ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳಿಗೆ ಸಾಹಿತ್ಯ ಸಂಗೀತ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಿದರು.ಈ ವೇಳೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಗಮೇಶ ತಾಳಿಕೋಟಿ ತಮ್ಮ ಕವನ ರಚನೆಯ ಕಲಿಕೆಯ ಅನುಭವವನ್ನು ಹಂಚಿಕೊಂಡರು, ಉಪಸ್ಥಿತಿ ವಹಿಸಿದ್ದ ತಾಲೂಕು ಘಟಕದ ಅಧ್ಯಕ್ಷರಾದ ಶಾಂತಾ ಚೌರಿ ತಮ್ಮ ಸ್ವರಚಿತ ಗೀತೆಯನ್ನು ಹಾಡುವುದರ ಮೂಲಕ ಮಕ್ಕಳಿಗೆ ಕವನ ರಚನೆ ಕುರಿತು ಸಲಹೆ ನೀಡಿದರು.
ಕರೋಕೆ ಗಾಯನ ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಿದ ಶಿವಾನಂದ ರವರು ಸಂಗೀತ ಹಾಗೂ ಸಾಹಿತ್ಯದ ಕುರಿತು ಮಾತನಾಡಿದರು,
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ಮಾಲಾಶ್ರೀ ಮತ್ತು ಪಾಲಕರು ಉಪಸ್ಥಿತರಿದ್ದರು, ಕರುನಾಡು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಲಕ್ಷ್ಮೀ ಕಳ್ಳಿಗುಡ್ಡಿ ನಿರೂಪಿಸಿದರು.ಶಿಕ್ಷಕಿ ಕುಸುಮಾ ಅಂಗಡಿ ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.