ಭಾರತ ಯಾವುದೇ ಮೂಲೆಗಳಲ್ಲಿ ನೀವು ನೋಡಿದರೂ ಪ್ರಾಣದೇವ ಆಂಜನೇಯನಿಗೆ ಒಂದು ದೇವಸ್ಥಾನ ಇದ್ದೆ ಇರುತ್ತದೆ, ಹನುಮನಿಲ್ಲದ ಉರಿಲ್ಲ ಎಂದೆನಬಹುದು.
ಶಿಕಾರಿಪುರದ ಬ್ರಾಂತೇಶ, ಕದರಮಂಡಲಗಿ ಯ ಕಾಂತೇಶ, ಸಾತೆನಹಳ್ಳಿಯ ಶಾಂತೇಶ ಈ ಮೂರು ಹನುಮ ದೇವರ (ಪ್ರಾಣದೇವರು) ದರ್ಶನವನ್ನು ಒಂದೇ ದಿನ ಪಡೆದರೆ ಸಕಲ ಕಷ್ಟ ಕಾರ್ಪಣ್ಯಗಳು ಅಳಿದು ಹೋಗುತ್ತದೆ ಎಂಬ ಪ್ರತೀತಿ ಇದೆ.
ದೂರ್ವಾಸ, ವಶಿಷ್ಠ ಮತ್ತು ವ್ಯಾಸ ಮುನಿಗಳು ಈ ಮೂರು ಹನುಮ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿ ಇದೆ.
ಶ್ರೀ ಕಾಂತೇಶಸ್ವಾಮಿಯನ್ನು ದಿನಾಲು ಮೂರು ಅವತಾರಗಳಲ್ಲಿ ಅಲಂಕರಿಸಿ ಪೂಜೆ ಸಲ್ಲಿಕೆಯಾಗುತ್ತದೆ. ಹನುಮಾವತಾರ, ಭೀಮಾವತಾರ, ಮಧ್ವಾವತಾರಗಳಲ್ಲಿ ತ್ರಿಕಾಲದಲ್ಲಿ ಪೂಜೆ ಆಗುತ್ತವೆ.
ಕನಕದಾಸರು ಹುಟ್ಟಿದ್ದು ಬಾಡ ಗ್ರಾಮವಾದರೂ ಕಾಗಿನೆಲೆಗೆ ಬಂದು ನೆಲೆಸಿದರು.ಕುಲದೈವ ತಿರುಪತಿ ವೆಂಕಟೇಶನ ದರ್ಶನ ಪಡೆಯಲು ಆಗಾಗ ತಿರುಪತಿಗೆ ಪ್ರಯಾಣ ಮಾಡುತ್ತಿದ್ದರಂತೆ ಆಗ ಕದರಮಂಡಲಗಿ ಕಾಂತೇಶನ ದರ್ಶನ ಪಡೆದು ಲಕ್ಷ್ಮಿನಾರಾಯಣನ ಗುಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರಂತೆ.ಕಾರಣ ಈ ದೇವಸ್ಥಾನ ಕನಕದಾಸರ ಗುಡಿಯಾಯಿತು ಎಂದು ಹೇಳುತ್ತಾರೆ.
ಮೂರು ಊರಿನ ಹನುಮನರನ್ನು ಸೂರ್ಯೋದಯದಿಂದ ಸೂರ್ಯಾಸ್ತ ಆಗುವುದೊರಳಗಾಗಿ ದರ್ಶನ ಪಡೆದುಕೊಳ್ಳುವುದು ವಿಶೇಷ. ಸಾಡೇಸಾತಿ, ಅಷ್ಟಮ, ಅರ್ಧಾಷ್ಟಮ, ಪಂಚಮ ಶನಿಕಾಟದಲ್ಲಿರುವವರು ತಪ್ಪಿಸದೇ ಇಲ್ಲಿಗೆ ಹೋಗಬೇಕು. ಅಷ್ಟೊಂದು ಮಹತ್ವವಾದ ಸ್ಥಳ ಮಹಿಮೆ ಈ ಮೂರು ಸ್ಥಳಗಳಿಗಿವೆ
ಮೂರ್ತಿ ಪ್ರತಿಷ್ಠಾಪಿಸುವಾಗ ಕಾಂತೇಶನ ಕಣ್ಣಲ್ಲಿ, ಭ್ರಾಂತೇಶನ ನೆತ್ತಿಯಲ್ಲಿ, ಶಾಂತೇಶನ ಪಾದದಲ್ಲಿ ಅತೀ ಶ್ರೇಷ್ಠವಾದ ಸಾಲಿಗ್ರಾಮವನ್ನು ಸ್ಥಾಪಿಸಲಾಗಿದೆ.
ಸಾತೇನಹಳ್ಳಿಯ ಶಾಂತೆಶ ದೇಗುಲದ ಇತಿಹಾಸವನ್ನು ಅದ್ಬುತ. ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳ ಭಾಗ್ಯ ಕರುಣಿಸುವ ಹನುಮ ,ಕಲಿಯುಗದ ಕಾಮಧೇನು
ಪ್ರತಿವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಶ್ರವಣ ನಕ್ಷತ್ರದಂದು ಮಕ್ಕಳಾಗದವರಿಗೆ ವಿಶೇಷ ಪ್ರಸಾದವನ್ನು ನೀಡಲಾಗುತ್ತದೆ. ಬಾಳೇ ಹಣ್ಣಿನಲ್ಲಿ ನೀಡಲಾಗುವ ವಿಶೇಷ ಔಷಧಿಯನ್ನು ಶ್ರದ್ಧಾ ಭಕ್ತಿಯಿಂದ ಸೇವಿಸಿದರೆ ಸಂತಾನ ಪ್ರಾಪ್ತಿ ಯಾಗುತ್ತದೆ ಎಂದು ಅನಾದಿ ಕಾಲದಿಂದಲೂ ಪ್ರತೀತಿ ಇದೆ .ಸಂತಾನ ಭಾಗ್ಯ ಪಡೆದ ಅದೆಷ್ಟೊ ಕುಟುಂಬಗಳು ತಪ್ಪದೆ ಹರಕೆ ತೀರಿಸುತ್ತಾರೆ
ಸಾತೇನಹಳ್ಳಿಯ ಶಾಂತೆಶ ದೇಗುಲದ ಇತಿಹಾಸವನ್ನು ಅದ್ಬುತ. ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳ ಭಾಗ್ಯ ಕರುಣಿಸುವ ಹನುಮ ,ಕಲಿಯುಗದ ಕಾಮಧೇನು
ಪ್ರತಿವರ್ಷ ಶ್ರವಣ ನಕ್ಷತ್ರದಂದು ಮಕ್ಕಳಾಗದವರಿಗೆ ಇಲ್ಲಿ ಪ್ರಸಾದವನ್ನು ನೀಡಲಾಗುತ್ತದೆ ಬಾಳೇ ಹಣ್ಣಿನಲ್ಲಿ ನೀಡಲಾಗುವ ಪ್ರಸಾದ್ ಸೇವಿಸಿದರೆ ಸಂತಾನ ಪ್ರಾಪ್ತಿ ಯಾಗುತ್ತದೆ ಎಂದು ಹಳೆಯ ಕಾಲದಿಂದಲೂ ಐತಿಹ್ಯ ಇದೆ .ಫಲ ಪಡೆದ ಕುಟುಂಬಗಳು ತಪ್ಪದೆ ಕಾಣಿಕೆ ಸಲ್ಲಿಸುತ್ತಾರೆ
ಮುಂಡಗೋಡದಿoದ ತೆರಳುವುದು ಹೇಗೆ?
ಮುಂಡಗೋಡದಿಂದ ಬಂಕಾಪುರ ರಸ್ತೆಯ ಕೋಣನಕೇರಿ ಮಾರ್ಗವಾಗಿ ಹಾನಗಲ್ ತಲುಪಬೇಕು, ನಂತರ ಆನವಟ್ಟಿ, ಶಿರಾಳಕೊಪ್ಪ, ಮಾರ್ಗ ಮೂಲಕ ಶಿಕಾರಿಪುರ ತಲುಪಿ ಅಲ್ಲಿ ಬ್ರಾಂತೇಶ (ಹುಚ್ಚುರಾಯ) ಸ್ವಾಮಿ ದರ್ಶನ ಪಡೆಯಬೇಕು.
ಬಳಿಕ ಶಿಕಾರಿಪುರದಿಂದ ಮಾಸುರು ಮಾರ್ಗವಾಗಿ ರಟ್ಟಿಹಳ್ಳಿ ತಲುಪಬೇಕು ಅಲ್ಲಿಂದ ಕದರಮಂಡಲಗಿ ತಲುಪಿ ಅಲ್ಲಿ ಕಾಂತೇಶ ದೇವರ ದರ್ಶನ ಪಡೆಯಬೇಕು.
ಕೊನೆಯದಾಗಿ ಕದರಮಂಡಲಗಿ ಇಂದ
ಹಂಸಭಾವಿ ಮಾರ್ಗವಾಗಿ ಸಾತೆನಹಳ್ಳಿ ತಲುಪಿ ಅಲ್ಲಿ ಶಾಂತೇಶ ನ ದಿವ್ಯ ದರ್ಶನ ಮಾಡಿ ಸೂರ್ಯಾಸ್ತ ಆಗುವುದ್ರೊಳಗೆ ಮನೆಯನ್ನು ತಲುಪಬೇಕು.