ನೆಲಮಂಗಲ ತಾಲ್ಲೂಕಿನ ಕಂಬಾಳು ವೃತ್ತದ ಗ್ರಾಮ ಲೆಕ್ಕಾಧಿಕಾರಿ ಗೋಪಾಲ್ ಮೇಲೆ ಗ್ರಾಮ ಮಹಜರು ವೇಳೆ ಗ್ರಾಮದ ವ್ಯಕ್ತಿಯೊಬ್ಬನಿಂದ ಹಲ್ಲೆ
ತಾಲ್ಲೂಕಿನ ಶಿವಗಂಗೆ ಬಳಿಯ ಗಂಟೆ ಹೊಸಹಳ್ಳಿ ಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಇನ್ನೆಲೆಯಲ್ಲಿ ಮೃತೊಟ್ಟ ವ್ಯಕ್ತಿಯ ಮರಣ ದೃಢೀಕರಣದ ವೇಳೆ ಗ್ರಾಮ ಮಹಜರು ಮಾಡಲು ತೆರಳಿದ್ದಾಗ ಕೃಷ್ಣಪ್ಪ ಎಂಬ ವ್ಯಕ್ತಿಯಿಂದ ಹಲ್ಲೆ ನಡೆದಿದೆ.
ಇನ್ನು ಹಲ್ಲೆ ಮಾಡಿರುವ ಕೃಷ್ಣಪ್ಪ ಎಂಬುವವರು ಅಣ್ಣ ಹನುಮಂತರಾಯಪ್ಪನವರ ಮಗ ಚಿದಂಬರನ ಮರಣ ಪತ್ರದ ವಿಚಾರಣೆಗೆಂದು ಹೋದ ವೇಳೆ ಘಟನೆ ಸಂಭವಿಸಿದೆ ಇನ್ನು ಹಲ್ಲೆಯ ಸಂಬಂಧ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಇನ್ನು ದೈಹಿಕವಾಗಿ ಹಲ್ಲೆಗೊಳಗಾದ ಗ್ರಾಮ ಲೆಕ್ಕಾಧಿಕಾರಿ ಗೋಪಾಲ್ ಅವರನ್ನು ಡಾಬಸ್ ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆ ಹೆದೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವದನ್ನು ಗಮನಿಸಿದ ವೈದ್ಯಾಧಿಕಾರಿಗಳು ಗೋಪಾಲ್ ಅವರಿಗೆ ಸ್ಕ್ಯಾನಿಂಗ್ ಅವಶ್ಯಕತೆ ಇರುವ ಕಾರಣ ಅವರನ್ನು ತಾಲ್ಲೂಕಿನ ಟಿ.ಬೇಗೂರು ಬಳಿಯ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೋಡಲಾಯಿತೆಂದು ದಾಬಸ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್ ಶ್ವೇತಾ ತಿಳಿಸಿದರು ಇನ್ನು ಹಲ್ಲೆಯ ಸಂಬಂಧ ಗೋಪಾಲ್ ಅವರ ಆರೋಗ್ಯ ವಿಚಾರಿಸಿದ ತಾಲ್ಲೂಕು ದಂಡಾಧಿಕಾರಿಗಳು ಸರ್ಕಾರಿ ಅಧಿಕಾರಿಗಳು ಕಾರ್ಯ ನಿರ್ವಹಿಸುವ ವೇಳೆ ಹಲ್ಲೆ ಮಾಡಿರುವ ಕುರಿತು ಬೇಸರ ವ್ಯಕ್ತ ಪಡಿಸಿದರು ಮತ್ತೂ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು ಈ ಸಮಯದಲ್ಲಿ ಆಸ್ಪತ್ರೆಯ ಬಳಿ ಗೋಪಾಲ್ ಅವರ ಆರೋಗ್ಯ ವಿಚಾರಿಸಲು ಬಂದಿದ್ದ ಇಡೀ ಕಂದಾಯ ಇಲಾಖೆಯ RI ಮತ್ತು VA ಗಳು ಘಟನೆಯ ಕುರಿತು ಹಲ್ಲೆ ಮಾಡಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು VA ಸಂಘದ ಅಧ್ಯಕ್ಷರಾದ ರಘುಪತಿಯವರು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಇನ್ನು ಈ ಕುರಿತು ಮಾತನಾಡಿದ ತಾಲ್ಲೂಕು ದಂಢಾದಿಕಾರಿಗಳು ಪೊಲಿಸ್ ಇಲಾಖೆಯ ಅಧಿಕಾರಿಗಳಿಗೆ ಕಾನೂನು ರೀತಿಯಾಗಿ ಸೆಕ್ಷನ್ 333-334-353 ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು ಈ ಕುರಿತು ಒಂದು ವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ನ್ಯಾಯ ಸಿಗುವವರೆಗೆ ಧರಣಿ ಮಾಡುವುದಾಗಿ ತಲೂಕಿನ RI ಮತ್ತು VA ಗಳು ತಿಳಿಸಿದರು.
ಈ ಸಂದರ್ಭದಲ್ಲಿ ಆರ್.ಐ.ಗಳಾದ ಕುಮಾರಸ್ವಾಮಿ, ರವಿಕುಮಾರ್,ಗ್ರಾಮ ಲೆಕ್ಕ ಕಾರಿಗಳಾದ ಬಾಲಕೃಷ್ಣ, ರಘುಪತಿ,ರೋಹಿತ್,ಕಿರಣ್ ಪ್ರಕಾಶ್,ಆಕಾಶ್, ಗಾಯವಾಡ್,ಸಹಾಯಕರಾದ ಮಂಜುನಾಥ್ , ಇನ್ನಿತರ ಕಂದಾಯ ಇಲಾಖೆಯ ಅಧಿಕಾರಿಗಳಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.