ಚಾಮರಾಜನಗರ ಹನೂರು ಪಟ್ಟಣದಲ್ಲಿ ಶ್ರೀ ಓಂ ಶಕ್ತಿ ದೇವಾಲಯದಲ್ಲಿ ಗಂಜಿ ಮೆರವಣಿಗೆ ಹಾಗೂ ವಿಶೇಷ ಪೂಜೆಯನ್ನು ಓಂ ಶಕ್ತಿ ಟ್ರಸ್ಟ್ ಮೂಲಕ ಏರ್ಪಡಿಸಲಾಗಿದೆ.
ಓಂ ಶಕ್ತಿ ಟ್ರಸ್ಟ್ ನ ಅಧ್ಯಕ್ಷರಾದ ಸೋಮೇಗೌಡ ಮಾತನಾಡಿ ಓಂ ಶಕ್ತಿ ದೇವಾಲಯದಲ್ಲಿ ಆಡಿ ಮಾಸದ ಪ್ರಯುಕ್ತ ವಿಶೇಷ ಪೂಜೆ ಕಾರ್ಯಗಳನ್ನು ಸಲ್ಲಿಸಿ ಆಡಿ ಮಾಸದ ಶುಕ್ರವಾರದ ವಿಶೇಷವಾಗಿ ಮುಂಜಾನೆ ದೇವಿಗೆ ಪನ್ನೀರು,ಎಳನೀರು,ಅರಿಶಿನ,ಕುಂಕುಮ, ಜೇನುತುಪ್ಪ,ಗಂಧ,ಹಾಲಿನ ಅಭಿಷೇಕವನ್ನುಅರ್ಪಿಸಿ, ನಂತರ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿ,ಪುರೋಹಿತರು ನೆರೆದಿದ್ದ ಭಕ್ತಾದಿಗಳಿಗೆ ಮಡಿಕೆಯಲ್ಲಿ ಗಂಜಿಯನ್ನು ತುಂಬಿಕೊಡುತ್ತಾರೆ ವಾದ್ಯ ಮೇಳಗಳ ಜೊತೆಯಲ್ಲಿ ಮಹಿಳೆಯರು ಮಡಿಕೆಯನ್ನು ಹೊತ್ತು ಆಂಜನೇಯ ಸ್ವಾಮಿ ದೇವಾಲಯ ಹಾಗೂ ಮೈಸೂರು ಮಾರಮ್ಮ ದೇವಾಲಯಗಳ ಮುಖಾಂತರ ಓಂ ಶಕ್ತಿ ದೇವಾಲಯಕ್ಕೆ ಬಂದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗುತ್ತಾರೆ.
ತಮಿಳುನಾಡಿನಲ್ಲಿ ಆಡಿ ಮಾಸದಲ್ಲಿ ಗಂಜಿ ಕಾರ್ಯಕ್ರಮವನ್ನು ಏರ್ಪಡಿಸುತ್ತಾರೆ.ಅದೇ ರೀತಿ ಹನೂರು ಪಟ್ಟಣದ ಓಂ ಶಕ್ತಿ ದೇವಾಲಯದಲ್ಲಿ, ಗ್ರಾಮಗಳಿಗೆ ಉತ್ತಮವಾದ ಮಳೆ ಬೆಳೆ ಆಗಬೇಕು. ಯಾವುದೇ ರೀತಿಯ ರೋಗರುಜುನಗಳು ಬರಬಾರದು ಎಂದು ಈ ರೀತಿಯ ಗಂಜಿ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸದಸ್ಯರುಗಳಾದ ವಸಂತಮ್ಮ,ನಾಗಮ್ಮ,ಲಕ್ಷ್ಮಿ,ಶಿಲ್ಪ ಇನ್ನು ಮುಂತಾದವರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್
