ಯಾದಗಿರಿ:ಜಿಲ್ಲೆಯ ಡಾ. ಎಸ್ ಬಿ ಕಾಮರೆಡ್ಡಿ ಕಾರ್ಯಾಲಯದಲ್ಲಿ ನೂತನ ಭೀಮ ಆರ್ಮಿ (ಭಾರತ ಏಕತಾ ಮಿಷನ್) ಜಿಲ್ಲಾ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ರಾಷ್ಟ್ರೀಯ ಅಧ್ಯಕ್ಷ ಸಂಸ್ಥಾಪಕರು ಚಂದ್ರಶೇಖರ್ ಆಜಾದ್ ರಾವಣ ನಾಯಕತ್ವ ಒಪ್ಪಿಕೊಂಡು ಭೀಮ ಆರ್ಮಿ ರಾಜ್ಯ ಅಧ್ಯಕ್ಷರಾದ ರಾಜ್ ಗೋಪಾಲ್ ಡಿಎಸ್,ಆದೇಶದ ಮೇರೆಗೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಜು ಅಣಬಿ,ಅವರ ಅಧ್ಯಕ್ಷತೆಯಲ್ಲಿ ಪ್ರಮುಖ ಮುಖಂಡರು ಕಾರ್ಯಕರ್ತರು ಸೇರಿ ಎಲ್ಲರ ಅಭಿಪ್ರಾಯ ಅನಿಸಿಕೆಗಳನ್ನು ವ್ಯಕ್ತಪಡಿಸಿ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು ಭೀಮ ಆರ್ಮಿ ಜಿಲ್ಲಾ ಅಧ್ಯಕ್ಷರಾಗಿ ಪ್ರಭು ಬುಕ್ಕಲ್,ಪ್ರಧಾನ ಕಾರ್ಯದರ್ಶಿ ಉಸ್ತುವಾರಿಯಾಗಿ ಶರಣರೆಡ್ಡಿ ಹತ್ತಿಗೂಡುರ್, ಉಪಾಧ್ಯಕ್ಷರಾಗಿ ಕಂಡಪ್ಪ ಅಯ್ಯಾಳ.ಬಿ.,ಮಾನಪ್ಪ ರಸ್ತಾಪುರ್,ಮಲ್ಲಿಕಾರ್ಜುನ್ ಯರಗೋಳ ನೇಮಕ ಮಾಡಲಾಯಿತು ಈ ವೇಳೆ ಶರಣು ಗ್ಯಾಂಗಿನ ಹತ್ತಿಗುಡೂರು ಮಾತನಾಡಿ ಭೀಮ್ ಆರ್ಮಿ ಸಂಘಟನೆ ಯಾದಗಿರಿ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ತರಲು ತಳಮಟ್ಟದ ಸಮುದಾಯದ ಜನಾಂಗದ ಮೇಲೆ ನಿರಂತರವಾಗಿ ದಬ್ಬಾಳಿಕೆ ದೌರ್ಜನ್ಯ ಸಾಮಾಜಿಕ ಬಹಿಷ್ಕಾರ ನಡೆಯುತ್ತಲೇ ಇವೆ ಇವುಗಳನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಸರ್ಕಾರ ಸಂಪೂರ್ಣ ವಿಫಲವಾಗಿದ್ದು. ಮುಂಬರುವ ದಿನಗಳಲ್ಲಿ ಯಾದಗಿರಿ ಜಿಲ್ಲೆಯಲ್ಲಿ ದಲಿತರು ಅಲ್ಪಸಂಖ್ಯಾತರು ಹಿಂದುಳಿದ ವರ್ಗದವರು. ರೈತರು ಕಾರ್ಮಿಕರು ಧ್ವನಿಲ್ಲದವರಿಗೆ ದುನಿಯಾಗಿ ಸಮಾಜಮುಖಿ ಕಾರ್ಯಕ್ಕೆ ಸಂಘಟನೆ ಅವಶ್ಯಕತೆ ಇದೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಸರ್ವ ಜನಾಂಗದವರ ಸಮಾನತೆ ಸಮ ಬಾಳು ಸಮಪಾಲು ಆರ್ಥಿಕವಾಗಿ,ಧಾರ್ಮಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ ಸಮಾಜ ಮುಖ್ಯ ಮುನ್ನಲ್ಲಿಗೆ ಬರಲು ನಾವು ನೀವು ಎಲ್ಲರೂ ಸೇರಿ ಸಂಘಟನೆ ಹೋರಾಟ ಅನಿವಾರ್ಯವಾಗಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯದ ವರ್ಗದವರು ರಾಜಕೀಯ ಅಧಿಕಾರಕ್ಕಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ ಸಮಾಜದ ಮಹಿಳೆಯರು ಯುವಕರು ಸರ್ಕಾರದ ಸೌಲಭ್ಯವನ್ನು ಪಡೆದುಕೊಂಡು ಸಮಾಜದಲ್ಲಿ ಮುನ್ನಲ್ಲಿಗೆ ಬರಲು ಸಾಧ್ಯ ಎಂದು ನುಡಿದರು ಬುದ್ಧ ಬಸವ ಅಂಬೇಡ್ಕರ್ ಅವರ ಆಚಾರ ವಿಚಾರಧಾರೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಏಳಿಗೆಗಾಗಿ ದುಡಿಯನಂದು ಕರೆ ಕೊಟ್ಟರು ಈ ಸಂದರ್ಭದಲ್ಲಿ ಶರಣು ಗ್ಯಾಂಗಿನ,ಮರಿಲಿಂಗ
ಬೆನಕನಹಳ್ಳಿ,ಅಂಬಲಪ್ಪ ರಸ್ತಾಪುರ್,ಮಡಿವಾಳಪ್ಪ ಅಣಬಿ,ವಸಂತ ಮ್ಯಾಗೇರಿ,ವಿಶಾಲ ಅಣಿಬಿ,ಸಿದ್ದು ಯಾದಗಿರಿ,ಬಸ್ಸು ನಟೆಕರ್,ಮಲ್ಲಣ್ಣ ಮಾಗನೂರು, ಪರಶುರಾಮ್ ಚಲವಾದಿ,ಬಸಲಿಂಗಪ್ಪ ಶಿರವಾಳ, ದೇವಪ್ಪ ಪೂಜಾರಿ,ಶರಣು ಶಿರವಾಳ,ಮಲ್ಲಿಕಾರ್ಜುನ್ ಹೊಸಮನಿ ಇನ್ನಿತರರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.