ಶಹಾಪುರ:ತಾಲೂಕಿನಾದ್ಯಂತ ವೈನ್ ಶಾಪ್ ಮತ್ತು ಬಾರ್ ಗಳಿಂದ ಅಕ್ರಮವಾಗಿ ಗ್ರಾಮಗಳಿಗೆ ವಾಹನಗಳ ಮೂಲಕ ಮದ್ಯ ಮಾರಾಟ ಮಾಡುತ್ತಿದ್ದಾರೆ.
ಸರ್ಕಾರದ ಎಲ್ಲಾ ನಿಯಮಗಳನ್ನು ಮೀರಿ ವೈನ್ ಶಾಪಗಳಲ್ಲಿ ಕುಡಿಯಬಾರದೆಂಬ ನಿಯಮವಿದ್ದರೂ ಕೂಡಾ ಕುಡಿಯುವುದಕ್ಕೆ ಪಕ್ಕದಲ್ಲಿ ಎಲ್ಲಾ ಬಾರುಗಳಲ್ಲಿ ವ್ಯವಸ್ಥೆ ಮಾಡಿದ್ದಾರೆ.ಮಾರುಕಟ್ಟೆಯ ಎಂ.ಆರ್.ಪಿ ಬೆಲೆಗಿಂತಲೂ ಜಾಸ್ತಿ ಹಣವನ್ನು ಪಡೆಯುತ್ತಿದ್ದಾರೆ.
ಪ್ರತಿ ಹಳ್ಳಿಯಲ್ಲೂ ಕೂಡ ರಾಜಾರೋಷವಾಗಿ ಎಲ್ಲೆಂದರಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ. ಅದಕ್ಕಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ
ಮಾನ್ಯ ಅಬಕಾರಿ ನಿರೀಕ್ಷಕರು ವಿಜಯಕುಮಾರ್ ಹಿರೇಮಠ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷರಾದ ಸೋಪಣ್ಣ ಹಳಿಸಗರವರು ಮಾತನಾಡಿ ಇದೇ ವ್ಯವಸ್ಥೆ ಮುಂದುವರೆದರೆ ಶಹಾಪುರ ತಾಲೂಕಿನಲ್ಲಿ ಉಗ್ರವಾಗಿ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಅಶೋಕ್ ಡಿಚ್ಚಿ,ತಾಲೂಕು ಗೌರವಾಧ್ಯಕ್ಷರಾದ ಬಸ್ಸು ರತ್ತಾಳ, ತಾಲೂಕ ಕಾರ್ಯಾಧ್ಯಕ್ಷರಾದ ವೆಂಕಟೇಶ ನಾಯಕ, ಬಸವರಾಜ ವನದುರ್ಗ,ಗೋವಿಂದ ಆಲ್ದಾಳ,ಸಿದ್ದು ಬಾಣತಿಹಾಳ,ದೇವು ಕಾಡಮಗೆರಾ ಉಪಸ್ಥಿತರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್