ಹನೂರು:ಪಟ್ಟಣದಲ್ಲಿ ಶ್ರೀ ಓಂ ಶಕ್ತಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಗಂಜಿಯನ್ನು ಸಮರ್ಪಿಸಲಾಯಿತು ಓಂ ಶಕ್ತಿ ದೇವಾಲಯದಲ್ಲಿ ಆಡಿ ಮಾಸದ ಪ್ರಯುಕ್ತ ವಿಶೇಷ ಪೂಜೆ ಕಾರ್ಯಗಳನ್ನು ಸಲ್ಲಿಸಿ ಆಡಿ ಮಾಸದ ಶುಕ್ರವಾರದ ವಿಶೇಷವಾಗಿ ಮುಂಜಾನೆ ದೇವಿಗೆ ಪನ್ನೀರು,ಎಳನೀರು,ಅರಿಶಿನ, ಕುಂಕುಮ,ಜೇನುತುಪ್ಪ,ಗಂಧ,ಹಾಲಿನ ಅಭಿಷೇಕವನ್ನುಅರ್ಪಿಸಿ,ವಿಶೇಷ ಪೂಜೆಯನ್ನು ನೆರವಿಸಿದ ನಂತರ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿ,ವಿಧಿ ವಿಧಾನಗಳ ಮೂಲಕ ಗಂಜಿ ಪ್ರಸಾದಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಪುರೋಹಿತರು ನೆರೆದಿದ್ದ ಭಕ್ತಾದಿಗಳಿಗೆ ಮಡಿಕೆಯಲ್ಲಿ ಗಂಜಿಯನ್ನು ವಿತರಿಸಿದರು.ಮಹಿಳೆಯರು ಗಂಜಿಯನ್ನು ಮಡಿಕೆಯಲ್ಲಿ ಹೊತ್ತು ದೇವರ ನಾಮ ಹಾಗೂ ನೃತ್ಯ ಮಾಡುವುದು ನೋಡುಗರ ಮನಸಳೆಯಿತು ವಾದ್ಯ ಮೇಳಗಳ ಜೊತೆಯಲ್ಲಿ ಪ್ರಮುಖ ದೇವಾಲಯಗಳಲ್ಲಿ ಪೂಜೆಯನ್ನು ಸಲ್ಲಿಸಿ,ಓಂ ಶಕ್ತಿ ದೇವಾಲಯಕ್ಕೆ ತಲುಪಿ ಎಲ್ಲಾ ಮಹಿಳೆಯರು ತಂದಿದ್ದ ಮಡಿಕೆಯ ಗಂಜಿಯನ್ನು ಪ್ರಸಾದ ರೂಪದಲ್ಲಿ ಎಲ್ಲರಿಗೂ ವಿತರಿಸಿದರು ಓಂ ಶಕ್ತಿ ಟ್ರಸ್ಟ್ ರವರು ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ಅನ್ನ ದಾನವನ್ನು ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರು ಸೋಮೇಗೌಡ ಪುರೋಹಿತರಾದ ಅನ್ಬು ಸದಸ್ಯರುಗಳಾದ ವಸಂತಮ್ಮ,ನಾಗಮ್ಮ,ಲಕ್ಷ್ಮಿ,ಕವಿತಾ,ಇಂದ್ರಮ್ಮ,ಶಿಲ್ಪ, ಮರಿಗೌಡ್ರು ರಾಘು,ಸಿದ್ದರಾಜು,ಗಂಗಾಧರ್, ವೆಂಕಟೇಶ್ ಸೇರಿದಂತೆ ನೂರಾರು ಭಕ್ತಾದಿಗಳು ನೆರೆದಿದ್ದರು.
ವರದಿ ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.