ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮಡ್ನಾಳ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಆಗಿದ್ದ ಶ್ರೀಮತಿ ಮಲ್ಲಮ್ಮ ಬೀಳಗಿ ಇವರು 21 ವರ್ಷಗಳ ಸುಧೀರ್ಘ ಕಾಲ ಸೇವೆ ಸಲ್ಲಿಸಿ ಮಡ್ನಾಳ್ ಗ್ರಾಮದ ಶಾಲೆಯಲ್ಲಿ ಸೇವಾ ವಯೋ ನಿವೃತ್ತಿ ಹೊಂದಿದರು.
ಮಡ್ನಾಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಸಿ.ಆರ್.ಪಿ,ಬಿ.ಅರ್.ಪಿ ಹಾಗೂ ಸಮನ್ವಯಧಿಕಾರಿಗಳು ಭಾಗವಸಿದ್ದರು.ಶ್ರೀಮತಿ ರೇಣುಕಾ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.ಎಸ್.ಡಿ.ಎಮ್.ಸಿ ಅಧ್ಯಕ್ಷರು ಸೋಮಶೇಖರಯ್ಯ ಹಿರೇಮಠ್,ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಊರಿನ ಗಣ್ಯರು ವೇದಿಕೆಯಲ್ಲಿದ್ದರು ಕಾರ್ಯಕ್ರಮ ಅಧ್ಯಕ್ಷತೆಯನ್ನು ಮುಖ್ಯ ಗುರುಗಳು ಶ್ರೀ ಚಂದಪ್ಪ ವಹಿಸಿದ್ದರು,ಶ್ರೀ ವಿಶ್ವನಾಥ್ ಶಿಕ್ಷಕರು ಕಾರ್ಯಕ್ರಮ ನಿರೂಪಣೆ ಮಾಡಿದರು ಶಾಲೆಯ ಗುರುಮಾತೆಯರು,ತಾಲ್ಲೂಕಿನ ಬೇರೆ ಶಾಲೆ ಮುಖ್ಯ ಗುರುಗಳು,ಬಂಧುಗಳು,ಹಳೇ ವಿದ್ಯಾರ್ಥಿಗಳು,ಮಹಿಳೆಯರು,ಮುದ್ದು ಮಕ್ಕಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ನೂರಾರು ಸನ್ಮಾನಗಳು ಸಾಯಂಕಾಲ 6 ಗಂಟೆವರೆಗೂ ಜರುಗಿದವು.ಮಧ್ಯಾಹ್ನ ಸಿಹಿ ಹುಗ್ಗಿ,ಜೋಳದ ರೊಟ್ಟಿ, ಪಲಾವ್,ಸಾಂಬಾರ್ ಊಟವನ್ನು ಹಾಗೂ ಪೂರ್ತಿ ಕಾರ್ಯಕ್ರಮವನ್ನು ಮಡ್ನಾಳ್ ಗ್ರಾಮದವರೆ ತಮ್ಮ ಖರ್ಚಿನಿಂದಲೇ ಮಾಡಿದ್ದು ವಿಶೇಷ ಆಗಿತ್ತು ಶ್ರೀಮತಿ ಮಲ್ಲಮ್ಮ ಬೀಳಗಿ ಇವರು ಪ್ರತಿಯಾಗಿ “ನೆನಪಿನ ಕಾಣಿಕೆ” ಜೊತೆ ಹಲವು ಜನರಿಗೆ ಸನ್ಮಾನ ಮಾಡಿದರು. ನಂತರ ನಡೆದ ಶ್ರೀಮತಿ ಮಲ್ಲಮ್ಮ ಬೀಳಗಿ ಇವರನ್ನು ಮೆರವಣಿಗೆ ಮೂಲಕ ಶಾಲೆಯಿಂದ ಶಹಾಪುರದ ಮನೆವರೆಗೂ ಕಳುಹಿಸಿದ್ದು ವಿಶೇಷವಾಗಿತ್ತು.
ಗ್ರಾಮದಲ್ಲಿ ರಸ್ತೆ ಮೂಲಕ ತೆರೆದ ವಾಹನದಲ್ಲಿ ಹಾಡುತ್ತಾ,ಕುಣಿಯುತ ಒಂದು ಊರಿನ ಸಂಭ್ರಮದ ಹಾಗೆ ಮಹಿಳೆಯರು,ಮಕ್ಕಳು ಅಪಾರ ಸಂಖ್ಯೆ ವಿದ್ಯಾರ್ಥಿ ಬಳಗ ಕಳುಹಿಸಿ ಕೊಟ್ಟರು.ಇದು ಮಾತ್ರ ಅಪರೂಪದ ಘಟನೆ ಎಂದು ಹೇಳಬಹುದು. ಮಾತೃ ಹೃದಯದ ಮಲ್ಲಮ್ಮ ಶಿಕ್ಷಕಿಯರು ಹಲವಾರು ಮಕ್ಕಳ ಓದಿಗೆ ಸಹಾಯ ಮಾಡಿದ್ದಾರೆ ಹಳೇ ವಿದ್ಯಾರ್ಥಿಗಳ ಕಾಣಿಕೆ ಪಡೆಯುವಾಗ ಅವರು ಗಳಗಳನೆ ಅಳುತ್ತಿದ್ದರು.ಆಗ ಎಲ್ಲರ ಕಣ್ಣುಗಳು ಒದ್ದೆ ಆದವು.ಬೀರನೂರ್ ಗ್ರಾಮದ ಅವರ ವಿದ್ಯಾರ್ಥಿ ಮಲ್ಲಾರೆಡ್ಡಿ ಸಾಹುಕಾರ ಅವರು ರಾಯಚೂರ ಕೃಷಿ ವಿವಿಯಲ್ಲಿ ವಿಜ್ಞಾನಿ ಆಗಿದ್ದಾರೆ.ಹಲವರು ಪೊಲೀಸ್, ಶಿಕ್ಷಣ ಇಲಾಖೆಯಲ್ಲಿ ನೌಕರಿ ಪಡೆದಿದ್ದಾರೆ ಅವರೆಲ್ಲಾ ತಮ್ಮ ಬಾಲ್ಯ ನೆನೆದು ಶಿಕ್ಷಕಿಯವರನ್ನು ಹೊಗಳಿದರು. ವಿಜ್ಞಾನಿ ಮಲ್ಲರೆಡ್ಡಿಯವರು ಭಾವುಕರಾಗಿ ಕಣ್ಣೀರು ಹಾಕಿದರು.ನೂರಾರು ಜನ ಗ್ರಾಮದಿಂದ ಅವರ ಮನೆವರೇಗು ಅದ್ಧುರಿಯಾಗಿ ಕಳುಹಿಸಿದರು.ಮೇಡಂ ಅವರು ಶಾಲೆಗೆ ಎರಡು ಕಾಪಾಟು,50 ತಟ್ಟೆ, ಗ್ಲಾಸ್ ಗಳನ್ನು ದೇಣಿಗೆಯ ರೂಪದಲ್ಲಿ ನೀಡಿ ತಮ್ಮ ಶಿಕ್ಷಣ ಪ್ರೇಮ ತೋರಿದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.