ಬೆಳಗಾವಿ:ಗಂಡು ಮೆಟ್ಟಿದ ನಾಡು ಕ್ರಾಂತಿಯ ಬೀಡು ಬೈಲಹೊಂಗಲ ಸಮೀಪದ ಇಂಚಲ ಗ್ರಾಮದಲ್ಲಿ ಶಿವಾನಂದ್ ಬೆಳಗಾವಿ 21 ವರ್ಷಗಳ ಕಾಲ ಸುಧೀರ್ಘ ಭಾರತಾಂಬೆಯ ಸೇವೆಯನ್ನು ಮಾಡಿ ಮರಳಿ ತಾಯಿ ನಾಡಿಗೆ ಆಗಮಿಸಿದ್ದಾರೆ ಇವರ ತಂದೆ ನಾಗಪ್ಪ ಬೆಳಗಾವಿ ತಾಯಿ ಶಿವನವ್ವ ಬೆಳಗಾವಿ ಇವರ ಎರಡನೇ ಮಗನಾಗಿ ಕಡು ಬಡತನದಲ್ಲಿ ಜನಿಸಿದರು. ಸೈನಕ್ಕೆ ಸೇರಲು ಹೋಗುವಾಗ ಇವರ ಹತ್ತಿರ ಹಣವಿರದೆ ಇದ್ದಾಗ ಸೇರಿಕೊಂಡ ನೆನಪು ಇವರಿಗೆ ಇಂದಿಗೂ ಕಾಡುತ್ತಿದೆ ಎಷ್ಟೇ ಬಡತನ ಇದ್ದರೂ ಸಾಧನೆ ಮಾಡುವ ಛಲ ನಮ್ಮಲ್ಲಿ ಇರಬೇಕು ಛಲ ಒಂದೇ ಇದ್ದರೆ ಸಾಧಿಸುವವನಿಗೆ ಅವನ ಮುಂದೆ ಬೇರೆ ಏನು ಬೇಕಾಗಿಲ್ಲ ಎಂದು ಮಠದ ಹತ್ತಿರ ಯೋಧರು ಹೇಳಿದರು ಶ್ರೀ ಸಿದ್ದಾರೂಡ ಸ್ವಾಮಿಗಳ ಮಠ ಹುಬ್ಬಳ್ಳಿಗೆ ವೀರ ಯೋಧನು ಆಗಮಿಸಿದನು ಯೋಧ ನನ್ನು ಬರ ಮಾಡಿಕೊಳ್ಳಲು ಊರಿನ ಗ್ರಾಮಸ್ಥರು ಹಿರಿಯರು ಗ್ರಾಮ ಪಂಚಾಯಿತಿಯ ಸದಸ್ಯರು ಹೋಗಿದ್ದರು ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದು ವೀರಯೋಧನ ಸ್ವಗ್ರಾಮಕ್ಕೆ ಆಗಮಿಸಿದನು. ಬೈಲಹೊಂಗಲದಲ್ಲಿ ವೀರರಾಣಿ ಚೆನ್ನಮ್ಮನ ಪುತಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಓಪನ್ ಜೀಪ್ ನಲ್ಲಿ ವೀರಯೋಧನನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಿಕೊಂಡು ಪ್ರಮುಖ ಬೀದಿ ಬೀದಿಗಳಲ್ಲಿ ಮದ್ದು ಪಟಾಕಿ ಸುಡುತ್ತಾ ಬರಮಾಡಿಕೊಂಡರು ನಂತರ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಿದರು ವೀರ ಯೋಧನಿಗೆ ಬೈಲಹೊಂಗಲ ಯುವಕರು ಹಿರಿಯರು ಸನ್ಮಾನ ಮಾಡಿದರು ಪೊಲೀಸರು ಹಾಗೂ ನಾಗಪ್ಪ ಗುಂಡ್ಲೂರು ಮಾಜಿ ಸೈನಿಕರು ಬೈಲಹೊಂಗಲ ಮಾಜಿ ಸೈನಿಕರ ಗೆಳೆಯ ಬಳಗದವರು ಸನ್ಮಾನ ಮಾಡಿದರು. ಮೆರವಣಿಗೆಯ ಕಾರ್ಯಕ್ರಮದಲ್ಲಿ ಸೈನಿಕರಿಗೊಂದು ಸಲಾಂ ಸೈನಿಕರ ಹಾಡುಗಳನ್ನು ಹಚ್ಚುತ್ತಾ ಜೈ ಜವಾನ್ ಜೈ ಕಿಸಾನ್ ಭಾರತ್ ಮಾತಾ ಕೀ ಜಯ್ ಎಂದು ಸೈನಿಕರು ಜೈಕಾರ ಕೂಗಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.