ಧಾರವಾಡ:ಜಯ ಕರ್ನಾಟಕ ಜನಪರ ವೇದಿಕೆಯಿಂದ,
ಧಾರವಾಡ ಶಹರದಲ್ಲಿರುವ ವಾರ್ಡ್ ನಂಬರ್ 18, ರಲ್ಲಿರುವ ಗಣೇಶಷನಗರ ಹತ್ತಿರ ರೈಲ್ವೆ ಇಲಾಖೆಯ ಸಂಬಂಧಿಸಿದ ಖಾಲಿ ಜಾಗದಲ್ಲಿ ಸುಮಾರು 40 ವರ್ಷಗಳಿಂದ 30 ಬಡ ಕುಟುಂಬದವರು ಮನೆಯನ್ನು ನಿರ್ಮಿಸಿಕೊಂಡು ಜೀವನ ನಿರ್ವಹಿಸುತ್ತಿದ್ದು ಆದ್ರೆ ಈಗ ಏಕಾಏಕಿಯಾಗಿ ಯಾವುದೇ ರೀತಿಯ ಸಮಯ ಅವಕಾಶ ನೀಡದೆ ಸದರಿ ಮನೆಗಳನ್ನು ತೆರುವುಗೊಳಿಸಲು ನಿರ್ಧರಿಸಿದ್ದು ವಿಸಾದನೀಯ ಇದರಿಂದ ಈ ಬಡ ಜನತೆಗೆ ದಿಕ್ಕು ತೋಚದಂತಾಗಿದೆ ಆದ ಕಾರಣ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಶ್ರೀಜಿಲ್ಲಾಧಿಕಾರಿಗಳಿಗೆ ಬಡ ಜನತೆಗೆ ಮನೆಗಳನ್ನು ತೆರವುಗೊಳಿಸಲು ಕಾಲಾವಕಾಶ ನೀಡಿ ಮತ್ತು ಪರ್ಯಾಯ ವ್ಯವಸ್ಥೆ ಒದಗಿಸಿ ಕೊಡಬೇಕೆಂದು ಮನವಿ ಸಲ್ಲಿಸಲಾಯಿತು,ಈ
ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾಧವ,ಮಲ್ಲಿಕಾರ್ಜುನ ಅಸುಂಡಿ ಗದಿಗೇಶ ಸುಣಗಾರ,ಅರಣು ತೇಲಕರ,ಪ್ರಸನ್ನ ಗುಂಡನಗೌಡರ, ಅನ್ವರ ನದಾಫ,ರಿಯಾಜ ಮುಲ್ಲಾ,ಶಂಕರ ಜಾಧವ,ಅರುಣ ಜಾಧವ,ಮುಸ್ತಾಫ ಲಾಡಮ್ಮನವರ,ಶಿವಪ್ಪ ಮೂಗಿ,ಶಿವು ಜಾಕೋಜಿ, ಈರವ್ವ ನೇಕಾರ,ಶಾಂತವ್ವ ಪಿಳ್ಳಿ,ಕಮಲವ್ವ ಕುರುಬೆಟ, ಸುಶೀಲಾ ಕಾಡಪ್ಪನವರ,ಶಾಂತಾ ಸುಲದಾಳ ಚಂದ್ರು ಮರಲಿಂಗಪ್ಪನವರ ಮುಂತಾದವರು ಉಪಸ್ಥಿತಿದ್ದರು.
ವರದಿ-ಸದಾಶಿವ ಭೀ ಮುಡೆಮ್ಮನವರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.