ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಡಿವಾಳ ಸಮುದಾಯದವರಿಂದ ಶಾಸಕರಿಗೆ ಸನ್ಮಾನ

ಹನೂರು:ಮಡಿವಾಳ ಸಮುದಾಯ ಜನಾಂಗದ ಭವನವನ್ನು ನಿರ್ಮಾಣ ಮಾಡಿ ಕೊಡುವಂತೆ ಶಾಸಕ ಮಂಜುನಾಥ್ ಅವರಿಗೆ ತಾಲೂಕು ಸಮುದಾಯದ ಜನಾಂಗದವರು ಸನ್ಮಾನಿಸಿ ಗೌರವಿಸಿ ಮನವಿ ನೀಡಿದರು.

ಹನೂರು ಪಟ್ಟಣದ ಶಾಸಕ ಎಂ ಆರ್ ಮಂಜುನಾಥ್ ಅವರ ಕಚೇರಿಯಲ್ಲಿ ತಾಲೂಕು ಮಡಿವಾಳ ಸಮುದಾಯದ ಮುಖಂಡರಿಂದ ಶಾಸಕರಿಗೆ ಸನ್ಮಾನಿಸಿ ಗೌರವಿಸಿ ನಂತರ ತಾಲೂಕು ಅಧ್ಯಕ್ಷ ವಿಜಯಕುಮಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹನೂರು ತಾಲೂಕಿನಲ್ಲಿ ಮಡಿವಾಳ ಸಮುದಾಯದ ಜನರು ಬಡತನ ರೇಖೆಗಿಂತ ಕೆಳಗಿರುವ ಜನಾಂಗದವರಿಗೆ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿಕೊಳ್ಳಲು ನಿವೇಶನ ಇದೆ ಭವನ ನಿರ್ಮಾಣ ಮಾಡಿಕೊಳ್ಳಲು ಅನುದಾನ ನೀಡಬೇಕು ಈ ಹಿಂದೆ ಇದ್ದಂತಹ ಹಲವಾರು ಬಾರಿ ಮಾಜಿ ಶಾಸಕರಿಗೆ ಭವನ ನಿರ್ಮಾಣ ಮಾಡಲು ಮನವಿ ಸಲ್ಲಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ ನೂತನವಾಗಿ ಹನೂರು ಕ್ಷೇತ್ರದ ಶಾಸಕರಾಗಿ ಎಂ ಆರ್ ಮಂಜುನಾಥ್ ಅವರು ಕಡು ಬಡವರ ದೀನದಲಿತರ ಪರವಾಗಿರುವ ಶಾಸಕರು ಮಡಿವಾಳ ಸಮುದಾಯದವರ ಭವನವನ್ನು ನಿರ್ಮಾಣ ಮಾಡಿಕೊಳ್ಳಲು ಅನುದಾನ ನೀಡುವಂತೆ ಇದೇ ಸಂದರ್ಭದಲ್ಲಿ ಮನವಿ ನೀಡಿ ಮಾತನಾಡಿದರು
ನಂತರ ಮಾತನಾಡಿದ ಶಾಸಕ ಎಮ್ ಆರ್ ಮಂಜುನಾಥ್ ತಾಲೂಕಿನ ಮಡಿವಾಳ ಸಮುದಾಯದ ಜನಾಂಗದವರಿಗೆ ಬೇಕಾಗಿರುವ ಸಮುದಾಯ ಭವನಕ್ಕೆ ಅನುದಾನ ದೊರಕಿಸಿಕೊಡಲು ಕ್ರಮವಹಿಸಲಾಗುವುದು ಜೊತೆಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳಿಗೂ ಸ್ಪಂದಿಸುವುದಾಗಿ ಶಾಸಕರು ಸಮುದಾಯ ಮುಖಂಡರಿಗೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಡಿವಾಳ ಸಮುದಾಯದ ಹನೂರು ತಾಲೂಕು ಅಧ್ಯಕ್ಷ ವಿಜಯ್ ಕುಮಾರ್ ಕಾರ್ಯದರ್ಶಿ ಕೃಷ್ಣ ಮುಖಂಡರಾದ ರಮೇಶ್ ಮೋಹನ್ ರುದ್ರಶಕ್ತಿ ನಂದಿ ಸಿದ್ದರಾಜು ಗೋವಿಂದ್ರಾಜು ಶಾಂತ ಮಹದೇವ ಶೆಟ್ಟಿ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ವರದಿ-ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ