ಉತ್ತರಕನ್ನಡ :ಒಂದು ಕಡೆ ಕರ್ನಾಟಕ ಸರ್ಕಾರ ತಾನು ಕೊಟ್ಟಿರುವ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಇತ್ತ ಮುಂಡಗೋಡ ತಾಲೂಕಿನಲ್ಲಿ ಬಡವರಿಗೆ ನೀಡಲಾಗುವ ಪಡಿತರ ಅಕ್ಕಿಯನ್ನು ಹಳ್ಳಿಗಳ ಹಾಗೂ ನಗರದ ಮನೆಗಳಿಂದ 15 ರೂಪಾಯಿ kg ಗೆ ಪಡೆದುಕೊಂಡು ಅದನ್ನು ಕಾಳ ಸಂತೆಯಲ್ಲಿ 25 ರೂಪಾಯಿಗೆ ಮಾರಾಟ ಮಾಡುವ ದಂಧೆಕೋರರ ಗ್ಯಾಂಗ್ ನಗರದಲ್ಲಿ ಆಕ್ಟಿವ್ ಆಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ತಾಲೂಕ ಆಹಾರ ಮತ್ತು ಪಡಿತರ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ದೀಪದ ಕೆಳಗೆ ಕತ್ತಲು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಕೆಲವೆಡೆ ಸರ್ಕಾರ ಅಕ್ಕಿಯನ್ನು ಪೂರೈಸಲು ಹರಸಾಹಸ ಪಡುತ್ತಿರುವ ಬೆನ್ನಲ್ಲೆ ಈ ರೀತಿಯ ಅಕ್ರಮ ಪಡಿತರ ಅಕ್ಕಿ ಸಂಗ್ರಹಿಸುವ ಹಾಗೂ ಅದನ್ನು ಹೊರ ರಾಜ್ಯಗಳಿಗೆ ಸಾಗಾಟ ಮಾಡುವ ಗ್ಯಾಂಗ್ ಗಳನ್ನು ಆದಷ್ಟು ಬೇಗ ಹಿಡಿದು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.