ಬೀದರ್/ಔರಾದ:ನಾದಬ್ರಹ್ಮ ಕಲಾ ಸಂಸ್ಥೆ (ರಿ.) ಮೈಲೂರ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಸಂಗೀತ ಸಾಧನಾ”ಮಾಸಿಕ ಹಿಂದೂಸ್ಧಾನಿ ಶಾಸ್ತ್ರಿಯ ಸಂಗೀತ ಬೈಠಕ್ ಕಾರ್ಯಕ್ರಮ ನಡೆಯಿತು.
ಈ ಸಂಸ್ಥೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಬೈಠಕ್ ಕಾರ್ಯಕ್ರಮವು ಪ್ರತಿ ತಿಂಗಳು ನಡೆಸುತ್ತಿದ್ದೇವೆ ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಪ್ರತಿ ತಿಂಗಳು ಕಾರ್ಯಕ್ರಮ ಮಾಡುವುದರಿಂದ ಮಕ್ಕಳ ಕಲಿಕಾ ಶಕ್ತಿ ಹಾಗೂ ಮನೊಧೈರ್ಯ ಹೆಚ್ಚಿಸುತ್ತದೆ ಹಾಗೂ
ಸಂಗೀತ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ,ಶಾಂತಿ ಹಾಗು ಉಲ್ಲಾಸ ಸಿಗುತ್ತದೆ ಎಂದು ಹೇಳಿದರು.
ಜಿಲ್ಲೆಯ ಯುವ ಕಲಾವಿದರಾದ ಕಿರಣ್ ಸ್ವಾಮಿ ಶಾಸ್ತ್ರೀಯ ಗಾಯನ,ಅರವಿಂದ ಶೀಲವಂತ ಹಾರ್ಮೋನಿಯಂ,ಅಂಬರೀಶ ಶೀಲವಂತ ತಬಲಾ ಸಾಥ್ ಮಾಡಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು
ಈ ಸಂದರ್ಭದಲ್ಲಿ
ಮಲ್ಲಿಕಾರ್ಜುನ ನಾಗಮಾರಪಳ್ಳಿ,ಗುರುದಾಸ ಧರ್ಮಾಬಾದ,ಸಿಧ್ಧಾರೂಡ ಕಂದಗೂಳ,ನರೇಶ ಬಿರಾದಾರ,ರಾಚಯ್ಯ ಸ್ವಾಮಿ ಸಂತಪೂರ,ಪವನ ಡಪ್ಪುರ,ವಿಶಾಲ ಅಲ್ಮಾಸಪೂರ,ಪವನ ಸ್ವಾಮಿ ಖಾಸೆಂಪೂರ,ವಚನಶ್ರೀ ನೌಬಾದೆ,ವಿನೋದ ಅಲ್ಮಾಸಪೂರ,ದತ್ತು ವಿಳಾಸಪೂರ ಇವರಿಂದ ಸಂಗೀತ ಗಾಯನ ನೆರವೇರಿತು ಹಿರಿಯ ಕಲಾವಿದರಾದ
ಪುಂಡಲಿಕರಾವ ಪಾಟಿಲ ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.