ರಾಜ್ಯದಲ್ಲಿ ಸ್ವಚ್ಚ,ಪ್ರಾಮಾಣಿಕ,ಜನಪರ ರಾಜಕಾರಣಕ್ಕೆ ಹುಟ್ಟಿಕೊಂಡು ಕಳೆದ 4 ವರ್ಷಗಳಿಂದ ಜನ ಸಾಮಾನ್ಯರ ಪರವಾದ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಸಿಂಧನೂರು ತಾಲೂಕಿನ ಗೋಮರ್ಸಿ ಎಂಬ ಚಿಕ್ಕ ಹಳ್ಳಿಯ ಯುವಕ ನಿರುಪಾದಿ ಕೆ ಗೋಮರ್ಸಿ ಅವರನ್ನು ನೇಮಕ ಮಾಡಿ ಯುವ ಘಟಕದ ರಾಜ್ಯಾಧ್ಯಕ್ಷ ರಘು ಜಾಣಗೆರೆ ಆದೇಶ ಹೊರಡಿಸಿದ್ದಾರೆ.
ಇದೇ ಸಂದರ್ಭದಲ್ಲಿ
ಆದೇಶ ಸ್ವೀಕರಿಸಿ ಮಾತನಾಡಿದ ಯುವ ಘಟಕದ ನೂತನ ರಾಜ್ಯ ಉಪಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ನನ್ನ ಜನಪರ ಹೋರಾಟಗಳು,ಉತ್ತಮ ನಾಯಕತ್ವ ಗುಣ,ಒಳ್ಳೆಯ ಸಂಘಟನೆ,ಜನಪರ ಕಾಳಜಿಯನ್ನು ಗುರುತಿಸಿ ರಾಜ್ಯ ಮಟ್ಟದ ಪದವಿಯನ್ನು ನೀಡಿ ನನ್ನ ಜವಾಬ್ಧಾರಿಯನ್ನು ಕೆ ಆರ್ ಎಸ್ ಪಕ್ಷ ಹೆಚ್ಚಿಸಿದೆ. ನನ್ನಂತ ಸಾಮಾನ್ಯ ವರ್ಗದ ಯುವಕನಿಗೆ ರಾಜ್ಯ ಮಟ್ಟದ ಪದವಿಯನ್ನು ನೀಡಿದ್ದು ಬಹಳಷ್ಟು ಕುಷಿಯನ್ನು ನೀಡಿದೆ ನಾನು ನ್ಯಾಯ, ನೀತಿ,ಧರ್ಮವನ್ನು ಕಾಪಾಡುವ ನಿಟ್ಟಿನಲ್ಲಿ ಜನ ಸಾಮಾನ್ಯರ,ಮಹಿಳೆಯರ ,ಕೃಷಿ ಕಾರ್ಮಿಕರ,ವಿದ್ಯಾರ್ಥಿಗಳ ಪರವಾದ ಹೋರಾಟ,ಕಾರ್ಯಕ್ರಮಗಳನ್ನು ರೂಪಿಸಿ ಒಳ್ಳೆಯ ಸಂಘಟನೆಯನ್ನು ಕಟ್ಟಿ ಕೆ ಆರ್ ಎಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಸುತ್ತಿ ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಈಗಾಗಲೇ ನಾನು ಒಂದು ವರ್ಷಗಳ ಕಾಲ ರಾಯಚೂರು ಜಿಲ್ಲಾಧ್ಯಕ್ಷ ಸ್ಥಾನವನ್ನು ನಿಭಾಯಿಸಿ ಹಲವಾರು ಅನುಭವಗಳನ್ನು ಪಡೆದುಕೊಂಡಿದ್ದು ಪಕ್ಷದ ರಾಜ್ಯಾಧ್ಯಕ್ಷ ಶ್ರೀ ರವಿ ಕೃಷ್ಣಾರೆಡ್ಡಿ ಅವರ ನಾಯಕತ್ವದಲ್ಲಿ ಹಲವಾರು ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇನೆ ಇನ್ನಷ್ಟು ಜವಾಬ್ದಾರಿಗಳನ್ನು ನೀಡಿದ ರಾಜ್ಯ ಸಮಿತಿ ಗೆ ಹಾಗೂ ಪಕ್ಷದ ಪ್ರತಿಯೊಬ್ಬ ಕಾರ್ಯ ಕರ್ತರಿಗೆ ನಾನು ಆಭಾರಿ ಹಾಗೂ 2024 ರ ಕೊಪ್ಪಳ ಲೋಕಸಭಾ ಕ್ಷೇತ್ರದ ಸೇವಾ ಆಕಾಂಕ್ಷಿ ನಾನು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಸೋಮಸುಂದರ,ಜಿಲ್ಲಾ ಪದಾಧಿಕಾರಿಗಳಾದ ರಾಘವೇಂದ್ರ ಕೆ,ಬಸವ ಪ್ರಭು,ವಿಜಯ ಕೆ, ಗಂಗಾ ಕೆ, ಚಂದ್ರಾ ರೆಡ್ಡಿ ,ರಾಮಣ್ಣ, ಕುಮಾರ್ ನಾಯಕ್, ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.