ಉತ್ತರ ಕನ್ನಡ: ಮುಂಡಗೋಡ ತಾಲೂಕಿನ ಗಾಂಧಿನಗರ ವಾರ್ಡನ್ನು ನಿಯಮ ಬಾಹಿರವಾಗಿ ಸ್ಲಂ ಎಂದು ಘೋಷಣೆ ಮಾಡಿರುವುದು ನಿಯಮ ಬಾಹಿರ ಎಂದು ಇತ್ತೀಚಿಗೆ ಗಾಂಧಿನಗರ ಅಭಿವೃದ್ದಿ ಮಂಡಲದ ಸದಸ್ಯರೆಲ್ಲರೂ ಕಾರವಾರದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸ್ಲಂ ಘೋಷಣೆ ಹಿಂಪಡೆಯುವಂತೆ ಮನವಿ ಮಾಡಿದ್ದರು.
ಸಲ್ಲಿಕೆಯಾದ ಮನವಿ ಕುರಿತಂತೆ ಮಾನ್ಯ ಜಿಲ್ಲಾಧಿಕಾರಿಗಳು ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮುಂಡಗೋಡ ತಾಲೂಕಿಗೆ ವಿವಿಧ ಇಲಾಖೆಗಳ ಪರಿಶೀಲನೆಗೆ ಬಂದಿದ್ದರು,ಈ ವೇಳೆ ಗಾಂಧಿನಗರ ಅಭಿವೃದ್ದಿ ಮಂಡಲ ಹಾಗೂ ಗಾಂಧಿನಗರ ನಿವಾಸಿಗಳ ಸಮಕ್ಷಮ ದಲ್ಲಿ ಗಾಂಧಿನಗರ ದ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ ಮಾನ್ಯ ಜಿಲ್ಲಾಧಿಕಾರಿಗಳು, ಈ ಬಗ್ಗೆ ನಿವಾಸಿಗಳಿಂದ ಎಸ್ಟು ವರ್ಷಗಳಿಂದ ವಾಸ ವಾಗಿದ್ದಿರಿ ಮತ್ತು ನಿವಾಸಿಗಳು ಪಡೆದಿರುವ ಪಟ್ಟಾಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಪಡೆದುಕೊಂಡರು.
ಇದೆ ವೇಳೆ ಅವರು ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳಿoದ ಖಾಲಿ ಇರುವ ನಿವೇಶನಗಳ ಕುರಿತು ಮಾಹಿತಿಪಡೆದರು ನಂತರ ಪ್ರತಿ ಬೀದಿಗಳಲ್ಲಿ ಸಂಚರಿಸಿ ಕೂಲಂಕುಷವಾಗಿ ಗಾಂಧಿನಗರ ವಾರ್ಡ್ ನ ಚಿತ್ರಣ ಪಡೆದರು.ಈ ವೇಳೆ ಕೆಲ ವಾರ್ಡ್ ನಿವಾಸಿಗಳು ಸ್ಲಂ ಮಾಡಿರುವುದನ್ನು ತೆಗೆದುಹಾಕಿ ನಮಗೆ ಈಗಾಗಲೇ ಹಕ್ಕುಪತ್ರ ಕೊಟ್ಟದ್ದಾರೆ ನಾವೆಲ್ಲಾ 45 ವರ್ಷಗಳಿಂದ ಇಲ್ಲಿದ್ದೇವೆ ,ನಮಗೆಲ್ಲ ಮತ್ತೆ ಸ್ಲಂ ಘೋಷಣೆ ಮಾಡಿ ಮತ್ತೆ ತೊಂದರೆ ಸಿಲುಕಿಸಬೇಡಿ, ಎಂದು ಮನವಿ ಮಾಡಿದರು.ಇನ್ನೂ ಕೆಲವರು ಈಗಾಗಲೇ ಹಕ್ಕುಪತ್ರ ನೀಡಿ ಸ್ಲಂ ಎಂದು ಘೋಷಣೆ ಮಾಡಿದ್ದಾರೆ ಏನು ಬದಲಾವಣೆ ಮಾಡಬೇಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು,ವಸ್ತುಸ್ಥಿತಿ ಪರಿಶೀಲಿಸಲು ಬಂದಿದ್ದೇವೆ ಎಂದು ಮಾಹಿತಿ ನೀಡಿದರು.ಈ ವೇಳೆ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತರು ಆದ ದೇವರಾಜ್ ಆರ್ , ಮುಂಡಗೋಡ ತಹಶೀಲ್ದಾರ್ ರಾದ ಶಂಕರ್ ಗೌಡಿ, ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಆದ ಚಂದ್ರಶೇಖರ್ ಬಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.