ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಶ್ರೀ ಸಿ.ಬಿ ಅಸ್ಕಿ ಅವರ ಜನ್ಮದಿನದ ಅಂಗವಾಗಿ ಆಹಾರ ಸಾಮಗ್ರಿ ವಿತರಣೆ ಮಾಡಲಾಯಿತು. ಸಿ ಬಿ ಅಸ್ಕಿ ಅವರ ಸಾಮಾಜಿಕ ಸೇವೆ ಅನನ್ಯವಾಗಿದೆ ಪ್ರತಿವರ್ಷ ಜನ್ಮದಿನದ ಅಂಗವಾಗಿ ಕ್ಷೇತ್ರದ ವಿವಿಧ ಭಾಗಗಳಲ್ಲಿ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಒಳಗೊಂಡು ಅನೇಕ ರೀತಿಯ ಸಮಾಜಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಡವರಿಗೆ ಅನುಕೂಲ ಕಲ್ಪಿಸುವ ಕಾರ್ಯಮಾಡುತ್ತಾ ಬಂದಿದ್ದಾರೆ ಎಲ್ಲರನ್ನೂ ಪ್ರೀತಿಸುವ ಗುಣ ಹೊಂದಿರುವ ಶ್ರೀ ಸಿ.ಬಿ ಅಸ್ಕಿ ಅವರು ಬಡತನವನ್ನು ಅನುಭವಿಸಿ ಬೆಳೆದ ವ್ಯಕ್ತಿಯಾಗಿದ್ದಾರೆ.ಹೀಗಾಗಿ ಪ್ರತಿವರ್ಷ ಜನ್ಮದಿನದ ನಿಮಿತ್ತ ಬಡವರ ಅನುಕೂಲಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಅವರಿಗೆ ಆಸರೆಯಾಗುತ್ತಾ ಸಾಗಿದ್ದಾರೆ ಎಂದು ಮುಸ್ಲಿಂ ಬ್ಯಾಂಕ್ ಅಧ್ಯಕ್ಷರಾದ ಇಬ್ರಾಹಿಂ ಮನ್ಸೂರ್ ಹೇಳಿದರು.ಪ್ರತಿ ವರ್ಷದಂತೆ ಈ ವರ್ಷವೂ ಮುದ್ದೇಬಿಹಾಳದಲ್ಲಿ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಇದೇ ತಿಂಗಳ ಕೊನೆಯಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಮುಂದಾಗಿದ್ದಾರೆ ಇಂಥಹ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಅಸ್ಕಿ ಅವರಿಗೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಅವಕಾಶ ಆ ಭಗವಂತನು ಕರುಣಿಸಲಿ ಎಂದು ಆಶಿಸಿದರು ಅಸ್ಕಿ ಫೌಂಡೇಶನ್ ಪದಾಧಿಕಾರಿಗಳು ತಾಳಿಕೋಟಿಯ ಶ್ರೀ ಖಾಸ್ಗತೇಶ್ವರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಸಮುದಾಯ ಆರೋಗ್ಯ ಕೇಂದ್ರ ಮತ್ತು ಶ್ರೀ ಸಾಯಿ ಆಸ್ಪತ್ರೆ ಒಳಗೊಂಡು ವಿವಿಧ ಆಸ್ಪತ್ರೆಗಳಿಗೆ ತೆರಳಿ ಬ್ರೆಡ್,ಬಿಸ್ಕಿಟ್,ಹಣ್ಣುಗಳನ್ನು ವಿತರಿಸಿದರು ಈ ಸಮಯದಲ್ಲಿ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಐ.ಬಿ ತಳ್ಳೊಳ್ಳಿ,ಡಾ.ಶ್ರೀಶೈಲ ಹುಕ್ಕೇರಿ ಹಾಗೂ ಶ್ರೀ ಸಾಯಿ ಆಸ್ಪತ್ರೆಯ ಡಾ.ಶ್ರೀ ಮತಿ ಗಂಗಾಬಿಕಾ,ಪಾಟೀಲ ಹಾಗೂ ಅಸ್ಕಿ ಫೌಂಡೇಶನ್ ಉಪಾಧ್ಯಕ್ಷರಾದ ವೀರೇಶ ಗೌಡ ಅಸ್ಕಿ ಹಾಗೂ ಕಾರ್ಯಕರ್ತರಾದ ಯಲ್ಲಪ್ಪ ಮಾದರ್,ಅಶೋಕ ನಾಯ್ಕೋಡಿ,ದ್ಯಾಮಣ್ಣ ಸೋಮನಾಳ,ಪ್ರಶಾಂತ ಜಲಪೂರ,ಬಸವರಾಜ ಚಿರಲದಿನ್ನಿ,ಮಹೇಶ ಅಸ್ಕಿ,ಮಡಿವಾಳಪ್ಪ ಮಡಿವಾಳರ್,ಮಹ್ಮದ ವಾಲಿಕಾರ ಕುಮಾರ ಐನಾಪೂರ,ಉಸ್ಮಾನ ಯತ್ನಾಳ,ರಮೇಶ್ ಅಸ್ಕಿ,ರಾಜು ಚಿರಕನಳ್ಳಿ,ಬಸವರಾಜ ಜಿರಲಬಾವಿ ಬಳಗಾನೂರ ಮೊದಲಾದವರು ಪಾಲ್ಗೊಂಡಿದ್ದರು. ವರದಿ-ಉಸ್ಮಾನ ಬಾಗವಾನ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ