ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರನಲ್ಲಿ
ದಿನಾಂಕ : ೨೯-೦೮-೨೦೨೩ರಂದು ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಟಿಇಟಿ ಅಣುಕು ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಮಹಾವಿದ್ಯಾಲಯದ ೯೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಸಿ. ಕನಕಟ್ಟೆ ಅವರು ಮಾತನಾಡಿ ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಉನ್ನತ ಮಟ್ಟದ ಗುರಿ ಇಟ್ಟುಕೊಂಡಿರಬೇಕು ಹಾಗೂ ಆ ಗುರಿಯನ್ನು ಪೂರ್ಣಗೊಳಿಸುವ ಹಾದಿ ಕೂಡ ತಿಳಿದಿರಬೇಕು, ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡಿಕೊಳ್ಳದೇ ಸದುಪಯೋಗಪಡಿಸಿಕೊಳ್ಳಬೇಕು ಏಕೆಂದರೆ ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ. ನಾವು ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ವಿದ್ಯಾಭ್ಯಾಸವನ್ನು ಆಸಕ್ತಿಯಿಂದ ಕಲಿತಾಗ ಸಾಧನೆ ಗೈಯಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮವನ್ನು ಸಂತೋಷಕುಮಾರ ಸಜ್ಜನ ಅವರು ಆಯೋಜಿಸಿದರು. ಮಹಾವಿದ್ಯಾಲಯದ ಉಪನ್ಯಾಸಕರಾದ ವೀಣಾ ಜಲಾದೆ, ರಾಜಕುಮಾರ ಸಿಂಧೆ, ಶಿಲ್ಪಾ ಹಿಪ್ಪರಗಿ, ಪಾಂಡುರಂಗ ಕುಂಬಾರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಸಾಗರ್ ಪಡಸಲೆ