ದಿನಾಂಕ : ೨೪-೦೮-೨೦೨೩
“ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರ ವತಿಯಿಂದ ವ್ಯಕ್ತಿತ್ವ ಹಾಗೂ ಯೋಗಾ ಕುರಿತು
ದಿನಾಂಕ : ೨೩-೦೮-೨೩ ರಿಂದ ೨೫-೦೮-೨೩ರ ವರೆಗೆ ಮೂರು ದಿನಗಳ ವಿಶೇಷ ಶಿಬಿರ ಕಾರ್ಯಕ್ರಮ”ಹಮ್ಮಿಕೊಳ್ಳಲಾಗಿತ್ತು.
ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರನ ವತಿಯಿಂದ ವ್ಯಕ್ತಿತ್ವ ಮತ್ತು ಯೋಗಾ ಕುರಿತು ಮೂರು ದಿನಗಳ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಗುರುನಾಥ ಮೂಲಗೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯೋಗವು ಇಂದಿನ ಯುಗದಲ್ಲಿ ವ್ಯಕ್ತಿಯ ಆಂತರಿಕ ಮತ್ತು ಬಾಹ್ಯ ವ್ಯಕ್ತಿತ್ವವನ್ನು ರೂಪಿಸಿ ರೋಗಮುಕ್ತನಾಗಿ ಮಾಡುವ ಸಾಧನವಾಗಿದೆ. ರೋಗಗಳ ಪರಿಹಾರಕ್ಕೆ ಎಲ್ಲಿ ವಿಜ್ಞಾನವು ನಿಲ್ಲುತ್ತದೆಯೋ ಅಲ್ಲಿಂದ ಯೋಗವು ರೋಗ ಪರಿಹಾರಕವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಂಡು ಉತ್ತಮ ಅಂಕ ಗಳಿಸಲು ಸಹಕಾರಿಯಾಗುತ್ತದೆ. ಅಲ್ಲದೇ ಯೋಗವು ವ್ಯಕ್ತಿಯನಲ್ಲ ಆತನ ವ್ಯಕ್ತಿತ್ವವನ್ನು ರೂಪಿಸು, ಚಿತ್ರವನಲ್ಲ ಚರಿತ್ರೆಯನ್ನು ರೂಪಿಸು, ಎನ್ನುವ ಮನೋಭಾವನೆಯನ್ನು ಮೂಡಿಸುತ್ತದೆ, ಇಂದಿನ ಯುವಜನರು ಅನೇಕ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಮಾನಸಿಕವಾಗಿ ಅಶ್ವಸ್ಥರಾಗುತ್ತಿದ್ದು, ಅವರಿಗೆಲ್ಲಾ ಯೋಗವು ಇವೆಲ್ಲವುಗಳಿಂದ ಮುಕ್ತಿ ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಾಸದ ಜೊತೆಗೆ ರಾಷ್ಟಾçಭಿಮಾನ, ವೈಜ್ಞಾನಿಕ ಚಿಂತನೆ, ಸುಸ್ಥಿರ ಆರ್ಥಿಕ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಜವಾಬ್ದಾರಿಯ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ನುಡಿದರು. ಹಾಗೆಯೇ ಯೋಗದ ವಿವಿಧ ಭಂಗಿಗಳನ್ನು ಪ್ರಾಯೋಗಿಕವಾಗಿ ಮಾಡಿತೋರಿಸಿದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಸಿ. ಕನಕಟ್ಟೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಇಂದಿನ ಯುವಪೀಳಿಗೆ ಅನೇಕ ತೊಂದರೆಗಳಿಗೆ ಈಡಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಯುವಕ-ಯುವಕಿಯರಿಗೆ ಸರಿಯಾದ ಮಾರ್ಗದರ್ಶನ ಇರದಿರುವುದು. ಯಶಸ್ವಿ ಜೀವನಕ್ಕೆ ಜೀವನ ಕೌಶಲ್ಯಗಳು ಅವಶ್ಯಕವಾಗಿವೆ. ಯೋಗದಿಂದ ತಮ್ಮ ಆಂತರಿಕ ಮನಸ್ಸನ್ನು ಸ್ಥಿರವಾಗಿಟ್ಟುಕೊಂಡು ಉತ್ತಮ ಆಲೋಚನೆಗಳಿಂದ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಉಪನ್ಯಾಸಕರಾದ ಸಂತೋಷಕುಮಾರ ಸಜ್ಜನ ನಿರೂಪಿಸಿದರು, ರಾಜಕುಮಾರ ಸಿಂಧೆ ಸ್ವಾಗತಿಸಿದರು ಪಾಂಡುರAಗ ಕುಂಬಾರ ವಂದಿಸಿದರು. ಉಪನ್ಯಾಸಕರಾದ ಶಿಲ್ಪಾ ಹಿಪ್ಪರಗಿ, ವೀಣಾ ಜಲಾದಿ, ಡಾ. ಸಿದ್ಧರಾಮ ನೆಂಗಾ ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಸಾಗರ ಪಡಸಲೆ