ಮುಂಡಗೋಡ : ನಗರದ ಕೆರೆಗಳ ಸ್ವಚ್ಛತೆ ಹಾಗೂ ಒತ್ತುವರಿಯನ್ನು ತೆರವುಗೊಳಿಸಲು ಕರುನಾಡ ಕಂದ ಪತ್ರಿಕೆ ಹಮ್ಮಿಕೊಂಡಿರುವ ಕೆರೆ ಉಳಿಸಿ ಅಭಿಯಾನದ ಹಿನ್ನೆಲೆಯಲ್ಲಿ ರವಿವಾರ ಕರುನಾಡ ಕಂದ ಡಿಜಿಟಲ್ ನಲ್ಲಿ ಹಾಕಿದ ಕೆರೆ ಸಂಕ್ಷಿಪ್ತ ವಿಡಿಯೋ ಪರಿಣಾಮವಾಗಿ ಮಂಗಳವಾರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಮ್ಮಾಜಿ ಕೆರೆಗೆ ಭೇಟಿ ನೀಡಿ ಸಂಪೂರ್ಣವಾಗಿ ಪರಿಶೀಲನೆ ನಡೆಸಿದರು.ಈ ವೇಳೆ ಕೆರೆಯ ಬಫರ್ ಝೋನ್ ನಲ್ಲಿ ಮನೆ ನಿರ್ಮಾಣ ಮಾಡುತ್ತಿರುವ ಕುರಿತು ಸಂಪೂರ್ಣ ಮಾಹಿತಿ ತೆಗೆದುಕೊಂಡು ಪರಿಶೀಲನೆ ನಡೆಸಿದರು.ಈ ವೇಳೆ ಸಣ್ಣ ನೀರಾವರಿ ಇಲಾಖೆಯ ಎಂ ಎನ್ ದಫೆದಾರ್ ಅವರು ಇನ್ನೆರಡು ದಿನಗಳಲ್ಲಿ ಕೆರೆಯ ಸಂಪೂರ್ಣ ಸರ್ವೇ ನಡೆಸಲಾಗುವುದು.ಈ ವೇಳೆ ಅತಿಕ್ರಮಣ ಮಾಡಿದ್ದಲ್ಲಿ ಮುಲಾಜಿಲ್ಲದೆ ತೆರವುಗೊಳಿಸುವುದಾಗಿ ಈ ವೇಳೆ ಅವರು ಮಾಹಿತಿ ನೀಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.