ಮುಂಡಗೋಡ:ಪೊಲೀಸರು ಆನಲೈನ್ ನಲ್ಲಿ ಬರುವ ಜಾಹೀರಾತುಗಳಿಗೆ ಮರುಳಾಗಬೇಡಿ, ಮೋಸಹೋಗಬೇಡಿ ಎಂದು ಸಾಕಷ್ಟು ಬಾರಿ ಎಷ್ಟೇ ಜಾಗೃತಿ ಮಾಡಿದರೂ ಪೊಲೀಸರ ಪ್ರಯತ್ನ ಫಲ ನೀಡುತ್ತಿಲ್ಲ,ಅಮಾಯಕ ಜನರ ಮುಗ್ಧತೆಯನ್ನು ದುರುಪಯೋಗ ಮಾಡಿಕೊಂಡು ಅವರನ್ನು ಆರ್ಥಿಕವಾಗಿ ವಂಚಿಸುವ ದುರುಳರ ಗುಂಪು ಸಾಕಷ್ಟು ಆಕ್ಟಿವ್ ಇದ್ದು ಇವರ ಹಾವಳಿಗೆ ಮುಂಡಗೋಡ ಮೂಲದ ವ್ಯಕ್ತಿಗೆ ಸಿಲುಕಿ ಹಣ ಕಳೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸರ್ ನಿಮ್ಮ ಮೊಬೈಲ್ ನಂಬರಿಗೆ ಐಫೋನ್ ಲಕ್ಕಿ ಡ್ರಾ ಆಗಿದೆ,ನಿಮಗೆ ಐಫೋನ್ ಕೊರಿಯರ ಮೂಲಕ ಕಳುಹಿಸಿ ಕೊಡುತ್ತೇವೆ ಎಂದು ಪಾಕಿಸ್ತಾನ ಮೂಲದ ಹ್ಯಾಕರ್ ಒಬ್ಬ ಮುಂಡಗೋಡದ ವ್ಯಕ್ತಿಗೆ ಕರೆ ಮೂಲಕ ತಿಳಿಸಿದ್ದು,ಇದನ್ನು ನಂಬಿದ ಅ ವ್ಯಕ್ತಿ ಪ್ರಾರಂಭಿಕವಾಗಿ 2000 ರೂಪಾಯಿಗಳನ್ನು ಹ್ಯಾಕರ್ ನೀಡುವ ಮೊಬೈಲ್ ನಂಬರಿಗೆ ಫೋನ್ ಪೆ ಮಾಡುತ್ತಾರೆ,ತದನಂತರ ಅದೇ ಹ್ಯಾಕರ್ ನಿಮ್ಮ ಮೊಬೈಲ್ ಕಸ್ಟಮ್ ಅಧಿಕಾರಿಗಳ ವಶದಲ್ಲಿದೆ ಅದನ್ನು ಬಿಡಿಸಲು ಮತ್ತೆ 2000 ಕೇಳುತ್ತಿದ್ದಾರೆ ಎಂದು ಮತ್ತೆ ಮುಂಡಗೋಡ ಮೂಲದ ವ್ಯಕ್ತಿ ಕಡೆಯಿಂದ 2000 ಫೋನ್ ಪೆ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಾನೆ ಇದಾದ ಮೇಲೆ ಮತ್ತೆ ಮುಂಡಗೋಡದ ವ್ಯಕ್ತಿಗೆ ಕರೆ ಮಾಡಿ ನಿಮ್ಮ ಐಫೋನ್ ಮೊಬೈಲ್ ಹುಬ್ಬಲಿಗೆ ಬಂದಿದೆ ಕೊರಿಯರ್ ಮೂಲಕ ಕಳುಹಿಸಲು ಕೊರಿಯರ್ ಬಾಯ್ 1000 ಕೇಳುತ್ತಿದ್ದಾನೆ ಎಂದು 1000 ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ ಇದಾದ ನಂತರ ಮುಂಡಗೋಡ ದ ಆ ವ್ಯಕ್ತಿ ಮೋಸ ಹೋಗಿರುವುದು ಧೃಡವಾದ ಬಳಿಕ ತನ್ನ ಅಳಲನ್ನು ಕರುನಾಡ ಕಂದ ಸುದ್ದಿ ಜೊತೆ ಹಂಚಿಕೊಂಡಿದ್ದಾರೆ , ಇನ್ನಾದರೂ ಜನ ಈ ರೀತಿಯ ಆಮಿಷಗಳಿಗೆ ಬಲಿಯಾಗಿ ತಮ್ಮ ಹಣ ಮತ್ತು ಸಮಯ ವ್ಯರ್ಥ ಮಾಡಿಕೊಳ್ಳುವುದು ಬಿಡಬೇಕಿದೆ ಅದರಲ್ಲೂ ಗೂಗಲ್ ನ ಪ್ಲೇ ಸ್ಟೋರ್ ನಿಂದ ಬೇಕಾ ಬಿಟ್ಟಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಮೊದಲು ಬಿಡಬೇಕು ಎಂದು ಪೊಲೀಸರು ತಮ್ಮ ಜಾಗೃತಿ ಸಂದೇಶಗಳಲ್ಲಿ ಹೇಳಿದರು ಜನ ಜಾಗರೂಕರಾಗಿ ಇರದೆ ತಪ್ಪು ಮಾಡುತ್ತಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.