ಮುಂಡಗೋಡ:ಅರಣ್ಯ ಇಲಾಖೆಯ ಕೆಲಸ ಏನಪ್ಪಾ ಅಂದ್ರೆ ಕಾಡನ್ನು ಹಾಗೂ ವನ್ಯ ಜೀವಿಗಳನ್ನು ಕಳ್ಳಕಾಕರಿಂದ ರಕ್ಷಿಸುವುದು ಅಂತಹದ್ದರಲ್ಲಿ ಕಾಡು, ಮರಗಿಡಗಳ ಹಾಗೂ ವನ್ಯ ಜೀವಿಗಳ ಮತ್ತು ಅರಣ್ಯ ಇಲಾಖೆಗೆ ಕುರಿತ ಏನಾದರೂ ಘಟನೆ, ಅಥವಾ ಮಾಹಿತಿಗಳು ಇದ್ದರೆ ನೇರವಾಗಿ ಮುಂಡಗೋಡ ಅರಣ್ಯ ಇಲಾಖೆಯ ಕಚೇರಿಗೆ ತೆರಳಿ ಮಾಹಿತಿ ಪಡೆದುಕೊಳ್ಳುವುದು ವಾಡಿಕೆ ಆದರೆ ಅರಣ್ಯ ಇಲಾಖೆಯ ಕಚೇರಿಗೆ ತೆರಳಿದರೆ ಹಾಗೂ ಅಧಿಕಾರಿಗಳು ಯಾವುದೇ ರೀತಿಯ ಮಾಹಿತಿ ನೀಡದೆ RFO ಸಾಹೇಬರಿಗೆ ಕರೆ ಮಾಡಿ ಅಥವಾ ಅವರನ್ನು ಸಂಪರ್ಕಿಸಿ ಅವರೇ ಮಾಹಿತಿ ನೀಡುತ್ತಾರೆ ಎಂದು ಹೇಳುತ್ತಾರೆ ಆದರೆ RFO ಸುರೇಶ್ ಕಲ್ಲೊಳ್ಳಿ ಅವರಿಗೆ ಕರೆ ಮಾಡಿದರೆ ಎಷ್ಟು ಬಾರಿ ಕರೆ ಮಾಡಿದರೂ ಸುತಾರಾಂ ಕರೆ ಸ್ವೀಕರಿಸದೆ, ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು,ಪತ್ರಕರ್ತರನ್ನು ಕಂಡರೆ RFO ಸಾಹೇಬರಿಗೆ ಏನಾದರೂ ತೊಂದರೆ ಇದೆಯೇ ಏಕೆ ಅವರು ಮಾಹಿತಿ ನೀಡದೆ ಕರೆ ಕೂಡಾ ಸ್ವೀಕರಿಸುತ್ತಿಲ್ಲ ಅಧಿಕಾರಿಗಳ ಈ ರೀತಿಯ ನಡವಳಿಕೆಗೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರು ಕೂಡಾ ನಾಟ್ ರಿಚೆಬಲ್,ಇದು ಮುಂಡಗೋಡ ಅರಣ್ಯ ಇಲಾಖೆಯ ದುಸ್ಥಿತಿ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.