ಹನೂರು:ರಸ್ತೆ ಒತ್ತುವರಿ ತೆರವುಗೊಳಿಸಲು ಕಂದಾಯ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದ ಸರ್ವೆ ಕಾರ್ಯವು ಜಮೀನು ಮಾಲೀಕರ ಗಲಾಟೆಯಿಂದ ಸ್ಥಗಿತಗೊಂಡಿತು.
ತಾಲೂಕಿನ ಚಿಕ್ಕಮಾಲಾಪುರ ಗ್ರಾಮದ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಿಂದ ಕಂಡಯ್ಯನಪಾಳ್ಯ ಡಾಂಬರ್ ಮುಖ್ಯ ರಸ್ತೆಯವರೆಗೆ ಇದ್ದಂತಹ ಕಾಲುದಾರಿ ಅಥವಾ ಬಂಡಿ ದಾರಿಯನ್ನು ಸುಮಾರು ಐದಾರು ವರ್ಷಗಳಿಂದ ಅಕ್ಕ ಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡು ಇತರೆ ಜಮೀನಿನವರು ಓಡಾಡಲು ಮತ್ತು ಕೃಷಿ ಚಟುವಟಿಕೆ ಕೈಗೊಳ್ಳಲು ರಸ್ತೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಈ ಹಿನ್ನಲೆಯಲ್ಲಿ ಈ ಬಗ್ಗೆ ಅಕ್ಕ ಪಕ್ಕದ ಜಮೀನು ಮಾಲೀಕರು ಒತ್ತುವರಿ ತೆರವುಗೊಳಿಸಿ ಕೃಷಿ ಚಟುವಟಿಕೆಗಳಿಗೆ ಓಡಾಡಲು ರಸ್ತೆ ಬಿಡಿಸಿಕೊಡಿವಂತೆ ಕೋರಿ ಕಂದಾಯ ಇಲಾಖೆಗೆ ದೂರು ಸಲ್ಲಿಸಿದ್ದರು ಪರಿಣಾಮ ಲೋಕನಹಳ್ಳಿ ರಾಜಸ್ವ ನಿರೀಕ್ಷಕ ಮಾದೇಶ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮಾರುತಿ ಮತ್ತು ಜಾಮೀನು ಮಾಲೀಕರ ಸಮ್ಮುಖದಲ್ಲಿ ಸರ್ವೆ ನಡೆಸಲು ಸ್ಥಳಕ್ಕೆ ಆಗಮಿಸಿ ಸರ್ವೆ ಮಾಡಲಾಗುತ್ತಿತ್ತು.
ಇದೇ ವೇಳೆ ಅದೇ ಹದ್ದುಬಸ್ತಿನಲ್ಲಿರುವ ಕಂಡಯ್ಯನ ಪಾಳ್ಯ ಗ್ರಾಮದ ಗು.ಕೃಷ್ಣೇಗೌಡ ಎಂಬುವವರ ಮಕ್ಕಳಾದ ಲೋಕೇಶ್ ಮತ್ತು ಗಣೇಶ್ ಎಂಬುವವರು ಕಂದಾಯ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿ ಇದು ನಮ್ಮ ಜಮೀನು, ನೀವು ಯಾರೇ ಬಂದರೂ ನಮ್ಮ ಜಮೀನಿನಲ್ಲಿ ರಸ್ತೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಜಗಳಕ್ಕೆ ಮುಂದಾದರು.
ಸನ್ನಿವೇಶವನ್ನು ಅರ್ಥಮಾಡಿಕೊಂಡ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಮಾದೇಶ್ ಈ ಪ್ರಕರಣವನ್ನು ನಮ್ಮ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಸಮ್ಮುಖದಲ್ಲೇ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಮಾಲಾಪುರ ಗ್ರಾಮದ ಜೆಡಿಎಸ್ ಮುಖಂಡರಾದ ಶ್ರೀನಿವಾಸ್, ಶಿವಕುಮಾರ್,ರೈತರಾದ ಕೃಷ್ಣ,ನರೇಂದ್ರ,ಮಂಜು ಸೇರಿದಂತೆ ಕಂಡಯ್ಯನಪಾಳ್ಯ ಮತ್ತು ಚಿಕ್ಕಮಾಲಾಪುರ ಗ್ರಾಮದ ಜಮೀನು ಮಾಲೀಕರು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.