ಯಾದಗಿರಿ: ಶಹಾಪುರ ನಗರದಲ್ಲಿ ಶುಕ್ರವಾರ 10 ಗಂಟೆಯಿಂದ ರಾತ್ರಿ 1 ಗಂಟೆ ವರೆಗೆ ಸುರಿದ ಮಳೆಯಿಂದಾಗಿ ನಗರದ ಐತಿಹಾಸಿಕ ದಿಗ್ಗಿ ಅಗಸಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಗಸಿಯಲ್ಲಿ ಹಬ್ಬದ ಸಡಗರ ಸಂಭ್ರಮಗಳು ನಡೆಯುತ್ತಿವೆ. ಇಲ್ಲಿನ ಸುತ್ತಮುತ್ತಲಿನ ನಾಗರಿಕರಿಗೆ ಪ್ರತಿ ದಿನ ಓಡಾಡುವ ಜನ ಸಾಮಾನ್ಯರಿಗೆ ಆತಂಕ ಉಂಟಾಗಿದೆ.
ನಗರಸಭೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಪುರಾತನ ಕಾಲದ ಹಳೆಯದಾದ ಕಟ್ಟಡದ ಮೇಲೆ ಚಾವಣಿಯ ಕಲ್ಲುಗಳು ನೆಲಕ್ಕುರುಳುವ ಪರಿಸ್ಥಿತಿ ಉಂಟಾಗಿದ್ದರಿಂದ ಜನ ಸಾಮಾನ್ಯರಿಗೆ ಅಗಸಿಯಲ್ಲಿ ಓಡಾಡುವಾಗ ಬಹಳ ಜಾಗ್ರತೆಯಿಂದ ತಿರುಗಾಡಿ ಎಂದು ಮನವರಿಕೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಶಿವಪುತ್ರ ಜವಳಿ ಆಗ್ರಹಿಸಿದರು.
ನಗರಸಭೆ ಅಧಿಕಾರಿಗಳು ಜನರಿಗೆ ತೊಂದರೆ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಂಡು, ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಅಥವಾ ಪುರಾತನ ಕಟ್ಟಡಗಳ ದುರಸ್ತಿಗಾಗಿ ಸಣ್ಣ ಕೈಗಾರಿಕೆ ಸಚಿವರ ಗಮನ ಹರಿಸಬೇಕು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ