ಬೆಳಗಾವಿ ಜಿಲ್ಲೆಯ ಅಥಣಿ ನಗರದ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯ ಹಾಗೂ ಅಮ್ಮನ ಮಡಿಲು ಸೇವಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಸಹೋದರಿಯರು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ದೊಡ್ಡ ಹಬ್ಬ. ಈ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸಹೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.
ಒಡಹುಟ್ಟಿದವರ ನಡುವಿನ ರಕ್ಷಣೆ ಪ್ರೀತಿ ಮತ್ತು ಬಾಂಧವ್ಯವನ್ನು ಬಲಪಡಿಸುವ ಮತ್ತು ಭಾವನಾತ್ಮಕ ಸಂಕೇತವಾಗಿ ಆಚರಿಸುವ ಹಬ್ಬ ರಕ್ಷಾ ಬಂಧನ. ರಕ್ಷಾ ಬಂಧನದ ದಿನ ಸಹೋದರಿಯರು ಸಹೋದರರ ಮಣಿಕಟ್ಟಿಗೆ ರಾಖಿ ಕಟ್ಟುವ ಮೂಲಕ ಪ್ರೀತಿ ಹಂಚುತ್ತಾರೆ. ಇದೇ ವೇಳೆ ಸಹೋದರರು ತಮ್ಮ ಸಹೋದರರಿಯರ ರಕ್ಷಣೆಯ ಜವಾಬ್ದಾರಿಯನ್ನು ಪಡೆಯುತ್ತಾರೆ. ದೇಶದೆಲ್ಲೆಡೆ ಅತಿ ಹೆಚ್ಚು ಸಂಭ್ರಮದಿಂದ ಆಚರಿಸುವ ಹಬ್ಬವೇ ರಕ್ಷಾ ಬಂಧನ.
ಇವತ್ತಿನ ದಿನ ನಗರದ ಆರಕ್ಷಕರಿಗೆ ಹಾಗೂ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ರಕ್ಷಾ ಕಟ್ಟುವ ರಕ್ಷಾ ಬಂಧನವನ್ನು ಮೂಲಕ ಆಚರಿಸಲಾಯಿತು ಈ ದಿನ ನನ್ನ ಜೀವನದಲ್ಲಿ ನೆನಪಿಡುವ ಹಬ್ಬ ಇದಾಗಿದೆ.
ಈ ಸಂದರ್ಭದಲ್ಲಿ ಅಮ್ಮನ ಮಡಿಲು ಸೇವಾ ಸಂಸ್ಥೆಯ ಸಂಸ್ಥಾಪಕರಾದ ವಿಶ್ವನಾಥ ಹರೋಲಿ, ಸುನೀಲ್ ತಂವಶಿ, ಕಾಶಿನಾಥ್ ತೈಕರ್, ರವಿಕುಮಾರ್ ಸವದಿ, ಅನೀಮೇಶ,ಪರಶು ಭಂಗಿ, ಅಭಯ ಸಗರಿ, ಪ್ರಕಾಶ ಕಾಂಬಳೆ, ಅಭಿಲಾಷ ಗಲಬಿ, ಪೂಜಾ ಹಿರೇಮಠ, ಐಶ್ವರ್ಯ ಅಳ್ಳಿಕಟ್ಟಿ,ಅಪ್ಸನಾ ಅವಟಿ, ವೈಶಾಲಿ ಶಿಂಧೆ, ಹೀಗೆ ಹಲವಾರು ಜನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.
ವರದಿ: ಸಿದ್ಧಪ್ಪ ಮದ್ದಣ್ಣನವರ