ಯಾದಗಿರಿ ಮತಕ್ಷೇತ್ರ ವ್ಯಾಪ್ತಿಗೆ ಬರುವ ಹಯ್ಯಾಳ.ಬಿ, ಮದರಕಲ್ ಮಾರ್ಗ ಮದ್ಯದಲ್ಲಿನ ನೂತನ ಬ್ಯಾರೇಜ್ ಕಂ ಸೇತುವೆ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ರಸ್ತೆ ಕೊಚ್ಚಿಕೊಂಡು ಹೋಗಿದ್ದು ತಾತ್ಕಲಿಕ ರಸ್ತೆ ಇಲ್ಲದೆ ಹಯ್ಯಾಳ ಲಿಂಗೇಶ್ವರ ಜಾತ್ರೆಗೆ ಬಂದಂತ ಭಕ್ತರು ರಸ್ತೆ ಇಲ್ಲದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಹಳ್ಳದ ನೀರಿನಲ್ಲಿ ರಸ್ತೆ ಇರದ ಕಾರಣ ರೈತರ ನಾಯಿಗಳು, ಕುರಿ ಮರಿಗಳು ಸೇರಿದಂತೆ ಜಾನುವಾರುಗಳು ಕೊಚ್ಚಿಕೊಂಡು ಹೋಗಿದ್ದು ಇದಕ್ಕೆ ಸಂಬಂಧ ಪಟ್ಟ ಗುತ್ತಿಗೆ ಸಂಸ್ಥೆ ಕೆ.ಕೆ.ಬಿ ಕಾಮಗಾರಿ ಹಾಗೂ ಇಲಾಖೆ ಎಇಇ, ಸೆಕ್ಷನ್ ಆಫೀಸರ್ ಕಾರಣಕರ್ತರಾಗಿದ್ದು ಕೂಡಲೆ ಇವರ ಮೇಲೆ ಪ್ರಕರಣ ದಾಖಲಿಸಿ, ಸಂಬಂಧಪಟ್ಟ ಗುತ್ತಿಗೆದಾರರನ ಹೆಸರು ಕಪ್ಪುಪಟ್ಟಿಗೆ ಸೇರಿಸಬೇಕೆಂದು ರೈತ ಸಂಘದ ಮಾನಶಯ್ಯ ನಾಯಕ್ ಪರೇಟಿ ಐಕೂರ ಇವರು ವಿಷಾದ ವ್ಯಕ್ತಪಡಿಸಿದರು.
ಕನಿಷ್ಠ ಸುರಕ್ಷೆ ಇಲ್ಲದ ಕಾಮಗಾರಿ ಇದಾಗಿದ್ದು ಅತ್ಯಂತ ಕೆಟ್ಟ ಕಾಮಗಾರಿ ಯಾಗಿದ್ದು ತರಾತುರಿಯಲ್ಲಿ ಇನ್ನು ಗಟ್ಟಿ ಮುಟ್ಟಾಗಿದ್ದ ಸೇತುವೆಯನ್ನು ಕೆಡವಿ ಸೇತುವೆ ನಿರ್ಮಾಣ ಮಾಡಲು ಹೊರಟಿರುವ ಅಧಿಕಾರಿಗಳು ಸೇತುವೆ ಪಕ್ಕದಲ್ಲಿ ಇರುವ ಜಮೀನುಗಳು ಹಾಳಾಗುತ್ತಿದೆ ಶಾಶ್ವತವಾಗಿ ಕೃಷಿ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ರೈತರಿಗೆ ಪರಿಹಾರ ನೀಡಬೇಕು , ಯೋಜನೆಯಿಂದ ಶಾಶ್ವತ ಹಾನಿ ಆಗಬಹುದಾದ ರೈತರ ಭೂಮಿಯನ್ನು ಜಿಲ್ಲಾಡಳಿತ ಭೂ ಸ್ವಾಧೀನ ಪಡಿಸಿಕೊಂಡು ರೈತರಿಗೆ ತೊಂದರೆಯಾಗದಂತೆ ಸೂಕ್ತ ಪರಿಹಾರ ನೀಡಬೇಕು , ಸ್ಥಳೀಯ ಶಾಸಕರು ಇತ್ತಕಡೆ ಗಮನ ಹರಿಸಬೇಕು ಎಂದು ರೈತರು ತಮ್ಮ ನೋವುಗಳು ಹಂಚಿಕೊಂಡರು.
ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕುವ ರೈತರೊಂದಿಗೆ ಅನಿರ್ಧಿಷ್ಟ ಸತ್ಯಾಗ್ರಹ ನಡೆಯಲಿದೆ ಎಂದು ವಾಲ್ಮೀಕಿ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಳ್ಳೂರು.ಎಂ, ರಾಷ್ಟೀಯ ಕಿಸಾನ್ ಸಂಘಟನೆ ಯಾದಗಿರ ಇವರು ಆಗ್ರಹಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್