ಮುಂಡಗೋಡ: ನಗರದ ಯಲ್ಲಾಪುರ ರಸ್ತೆಯ ಬಳಿ ಇರುವ ಅಮ್ಮಾಜಿ ಕೆರೆಯ ಒತ್ತುವರಿ ಹಾಗೂ ಬಫರ್ ಝೋನ್ ನಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿರುವ ಕುರಿತು ವರದಿಯ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆಯ AEE ಅವರು ಸ್ಥಳ ಪರಿಶೀಲನೆ ನಡೆಸಿ ಬಫರ್ ಝೋನ್ ನಲ್ಲಿ ಮನೆ ಕಟ್ಟುತ್ತಿರುವ ಕುರಿತು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದ್ದು ಎರಡು ದಿನಗಳಲ್ಲಿ ಸರ್ವೇ ಮಾಡುವ ಕುರಿತು ಆದೇಶ ಹೊರಡಿಸಿದ್ದರು ಆದರೆ ಅಧಿಕಾರಿಗಳು ಕೆರೆಯ ಸಂಪೂರ್ಣ ಸರ್ವೇ ಹಾಗೂ ಮನೆ ಹಾಗೂ ಒತ್ತುವರಿ ತೆರವು ಮಾಡಿ ಕೆರೆಯ ಪ್ರದೇಶವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸದೆ,ಮೀನಮೇಷ ಎಣಿಸುತ್ತಿದೆ,ಇದರಿಂದ ಜನ ಸಾಮಾನ್ಯರಿಗೆ ಒಂದು ನ್ಯಾಯ ಪ್ರಭಾವಿಗಳಿಗೆ ಒಂದು ನ್ಯಾಯ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದು ಯಾವುದೇ ಕಾರಣಕ್ಕೂ ಒತ್ತುವರಿಯನ್ನು ತೆರವು ಮಾಡಲೇಬೇಕು ಎಂದು ಪರಿಸರ ಪ್ರಿಯರು ಒತ್ತಾಯ ಮಾಡುತ್ತಿದ್ದಾರೆ.
