ಕಲಬುರಗಿ:ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಜೇವರ್ಗಿ ತಾಲೂಕಿನ ಸುಕ್ಷೇತ್ರ ಮಾವನೂರ ಗ್ರಾಮದ ಶ್ರೀ ಧರ್ಮರಾಯ ದೇವರ ಜಾತ್ರಾ ಮಹೋತ್ಸವ ಹಾಗೂ ಭವ್ಯ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಭಜನೆ,ಭಾಜಾ, ಭಜಂತ್ರಿ ಡೊಳ್ಳು,ಹಲಗೆ ವಾದ್ಯಗಳ ಸಂಗೀತದ ಸದ್ದಿನಲ್ಲಿ ಜರುಗಿತು.
ಶ್ರೀ ಧರ್ಮರಾಯ ದೇವಸ್ಥಾನದ ಏಳನೇ ಪೀಠಾಧಿಪತಿಗಳಾದ ಶ್ರೀ ಅಮೋಘಸಿದ್ಧ ಪೂಜಾರಿ ಮುತ್ಯಾವರ ನೇತೃತ್ವದಲ್ಲಿ ರಥೋತ್ಸವ ಕಾರ್ಯಕ್ರಮ ಮತ್ತು ಧರ್ಮಸಭೆ ಜರುಗಿತು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಅಮೋಘಸಿದ್ಧ ಮುತ್ಯಾ ಶ್ರೀ ಧರ್ಮರಾಯ ದೇವಸ್ಥಾನದ ಏಳನೇ ಪೀಠಾಧಿಪತಿಗಳು ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು ಕಾರ್ಯಕ್ರಮದಲ್ಲಿ ಶ್ರೀ ಶಿವಾನಂದ ಮಹಾಸ್ವಾಮಿಗಳು ವಿರಕ್ತ ಮಠ ಸೊನ್ನ ಆಶೀರ್ವಚನ ನೀಡಿದರು.ಶ್ರೀ ಧರ್ಮರಾಯ ದೇವರು ಪವಾಡ ಪುರುಷ ಹಲವಾರು ಪವಾಡ ಮಾಡಿ ಭಕ್ತರ ಉದ್ದಾರ ಮಾಡಿದ್ದಾರೆ ಅಂತ ಶರಣನ ಜಾತ್ರೆ ಮಾಡುವದರಿಂದ ಸಂತೃಪ್ತಿ ಪ್ರಾಪ್ತವಾಗುತ್ತದೆ ಎಂದು ಹೇಳಿದರು.
ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಯಡ್ರಾಮಿ,ಶ್ರೀ ನಿಂಗಣ್ಣ ಪೂಜಾರಿಹಂಗರಗಿ,ಶ್ರೀ ಗುಡ್ಡಣ್ಣ ಪೂಜಾರಿ ಹಂಗರಗಿ, ಶ್ರೀ ಮಲಕಾರಿ ಸಿದ್ದ ಒಡೆಯರ್ ಕಲ್ಲೂರ್ ಕೆ, ಶ್ರೀ ಧರ್ಮರಾಯ ಒಡೆಯರ್ ಕಲ್ಲೂರ್ ಕೆ, ಶ್ರೀ ಶರಣಬಸಪ್ಪ ಶರಣರು ಸೌಳಹಳ್ಳ ರೇವನೂರ, ಅಣಜಗಿ ಶ್ರೀ ಗಳು ಸೇರಿದಂತೆ ರಾಜಕೀಯ ದುರಿಣರಾದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜಶೇಖರ್ ಸಿರಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ವರದಿ:ಚಂದ್ರಶೇಖರ ಎಸ್ ಪಾಟೀಲ್